Home ಕ್ರೈಂ ನ್ಯೂಸ್ ಏಕವಚನದಲ್ಲಿ ಮಾತನಾಡೋ ಸಂಸ್ಕೃತಿ ಹುಟ್ಟು ಹಾಕಿದ್ದೇ ಬಿಜೆಪಿಗರು! ಮಸೀದಿ ಮುಂದೆ ನೀನು ಬಳಸಿದ್ದ ಪದ ಸರಿಯಾಗಿದ್ದರೆ ಇನ್ ಸ್ಪೆಕ್ಟರ್ ಮಾತನಾಡಿದ್ದು ಸರಿ ಎಂದೇ ಅರ್ಥ: ಪ್ರದೀಪ್ ಈಶ್ವರ್ ಟಾಂಗ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಏಕವಚನದಲ್ಲಿ ಮಾತನಾಡೋ ಸಂಸ್ಕೃತಿ ಹುಟ್ಟು ಹಾಕಿದ್ದೇ ಬಿಜೆಪಿಗರು! ಮಸೀದಿ ಮುಂದೆ ನೀನು ಬಳಸಿದ್ದ ಪದ ಸರಿಯಾಗಿದ್ದರೆ ಇನ್ ಸ್ಪೆಕ್ಟರ್ ಮಾತನಾಡಿದ್ದು ಸರಿ ಎಂದೇ ಅರ್ಥ: ಪ್ರದೀಪ್ ಈಶ್ವರ್ ಟಾಂಗ್!

Share
ಪ್ರದೀಪ್ ಈಶ್ವರ್
Share

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಪದಬಳಕೆಯ ವಾಕ್ಸಮರ ತೀವ್ರಗೊಂಡಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಯತ್ನಾಳ್ ಹಾಗೂ ಚಲವಾದಿ ನಾರಾಯಣಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಸೀದಿ ಎದುರು ಪದಬಳಕೆ ಹಾಗೂ ಏಕವಚನ ಸಂಸ್ಕೃತಿ:

ಮಸೀದಿ ಮುಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಬಳಸಿದ ನಿಂದನಾತ್ಮಕ ಪದಬಳಕೆಯನ್ನು ಪ್ರಶ್ನಿಸಿದ ಪ್ರದೀಪ್ ಈಶ್ವರ್, “ನೀವು ಬಳಸಿದ ಪದಬಳಕೆ ಸರಿಯಾಗಿದ್ದರೆ, ಪೊಲೀಸ್ ಇನ್‌ಸ್ಪೆಕ್ಟರ್ ಬಳಸಿರುವ ಭಾಷೆಯೂ ಸರಿಯಾಗಿದೆ ಎಂದೇ ಅರ್ಥ” ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ‘ಅವನಪ್ಪ-ಇವನಪ್ಪ’ ಎಂದು ಏಕವಚನದಲ್ಲಿ ಮಾತನಾಡುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ಬಿಜೆಪಿ ನಾಯಕರು ಎಂದು ಆರೋಪಿಸಿದ್ದಾರೆ.

ಅಂಬೇಡ್ಕರ್ ವಿಚಾರ ಹಾಗೂ ದಲಿತರ ಪರ ಸಮರ್ಥನೆ:

ಡಿಎಸ್ಎಸ್ ಶಾಲು ಧರಿಸುವವರ ಬಗ್ಗೆ ಮಾತನಾಡುವ ಪ್ರತಾಪ್ ಸಿಂಹಗೆ ಅಂಬೇಡ್ಕರ್ ಸಿದ್ಧಾಂತದ ಅರಿವಿಲ್ಲ. ದಲಿತ ನಾಯಕರು ಅಂಬೇಡ್ಕರ್ ಅವರ ವಂಶಸ್ಥರು, ಅವರ ರಕ್ತದಲ್ಲೇ ಅಂಬೇಡ್ಕರ್ ವಿಚಾರಗಳಿವೆ, ಅವರಿಗೆ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಸ್ವತಃ ತಮ್ಮದೇ ಪಕ್ಷದ ಒಬಿಸಿ ನಾಯಕರನ್ನೇ ತುಳಿಯುವ ಬಿಜೆಪಿಗರು ದಲಿತರನ್ನು ಸುಮ್ಮನೆ ಬಿಡುತ್ತಾರೆಯೇ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ.

ಪ್ರಾದೇಶಿಕ ಭಾಷೆ ಮತ್ತು ಯತ್ನಾಳ್ ಟೀಕೆ:

ಭಾಷೆಯ ವೈವಿಧ್ಯತೆಯ ಕುರಿತು ಮಾತನಾಡುತ್ತಾ, ಒಂದೊಂದು ಭಾಗದಲ್ಲಿ ಒಂದೊಂದು ಭಾಷಾ ಶೈಲಿ ಇರುತ್ತದೆ. ಉತ್ತರ ಕರ್ನಾಟಕದ ಲೀಡರ್‌ಗಳ ಭಾಷೆಗೆ ಹೋಲಿಸಿದರೆ ನಾವಿನ್ನೂ LKG/UKG ಯಲ್ಲಿದ್ದೇವೆ ಎಂದು ಯತ್ನಾಳ್ ಅವರ ಭಾಷಾ ಶೈಲಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

FIR ಹಾಗೂ ರಾಜಕೀಯ ವಾಗ್ದಾಳಿ:

ತಮ್ಮ ಮೇಲೆ ಈಗಾಗಲೇ ೮ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ ಅವರು, ಬಿ.ವೈ. ವಿಜಯೇಂದ್ರ, ಯತ್ನಾಳ್ ಹಾಗೂ ಹೆಸರು ಹೇಳದೇ ಪ್ರತಾಪ್ ಸಿಂಹ ವಿರುದ್ಧ ವ್ಯಂಗ್ಯವಾಡಿದರು. ಜೊತೆಗೆ, ರಾಹುಲ್ ಗಾಂಧಿ ಕುರಿತು ಚಲವಾದಿ ನಾರಾಯಣಸ್ವಾಮಿ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.