SUDDIKSHANA KANNADA NEWS/ DAVANAGERE/ DATE:16-12-2024
ಬೆಳಗಾವಿ: 150 ಕೋಟಿ ರೂಪಾಯಿ ಆಮೀಷವೊಡ್ಡಿದ್ದೆ ಎಂಬ ಆರೋಪ ನನ್ನ ಮೇಲೆ ಮಾಡಲಾಗಿದೆ. ಸಚಿವ ಪ್ರಿಯಾಂಕಾ ಖರ್ಗೆ ಆರೋಪಿಸಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಸಮರ್ಥನೆ ಮಾಡಿದ್ದಾರೆ. ಮುಡಾ, ವಾಲ್ಮೀಕಿ ಸೇರಿದಂತೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ, 150 ಕೋಟಿ ರೂಪಾಯಿ ಆಮೀಷದ ಬಗ್ಗೆಯೂ ಸಿಬಿಐ ತನಿಖೆ ನೀಡಲಿ. ಸಿಎಂ ಸಿದ್ದರಾಮಯ್ಯರಿಗೆ ಈಗ ಸಿಬಿಐ ಮೇಲೆ ನಂಬಿಕೆ ಬಂದಿದೆ ಎಂದು ವಾಗ್ದಾಳಿ
ನಡೆಸಿದರು.
ಅನ್ವರ್ ಮಾನಪ್ಪಾಡಿ ಅವರಿಗೆ ನಾನು 150 ಕೋಟಿ ರೂಪಾಯಿ ಆಮೀಷವೊಡ್ಡಿದ್ದೆ ಎಂಬ ಆರೋಪ ಮಾಡಿರುವ ಸಿದ್ದರಾಮಯ್ಯರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಲಿ. ವಿನಾಕಾರಣ ಆರೋಪ ಮಾಡುವುದನ್ನು ಬಿಡಲಿ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಕುರಿತಂತೆ ಮೋದಿ ಅವರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒಪ್ಪಿಸಲು ಎಂದು ಆಗ್ರಹಿಸಲಿ ಎಂದು ವಿಜಯೇಂದ್ರ ಸವಾಲು ಹಾಕಿದ್ದಾರೆ.