ಬೆಂಗಳೂರು: ವಾಲ್ಮೀಕಿ ಸಮಾಜದಲ್ಲಿ ನನ್ನ ವಿಲನ್ ಮಾಡಲು ಹೊರಟಿದ್ದೀರಾ. ಇದೆಲ್ಲಾ ನಡೆಯಲ್ಲ ಸ್ವಾಮಿ. ನಾನು ತಪ್ಪಿತಸ್ಥನಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜನತಾ ನ್ಯಾಯಾಲಯಕ್ಕೆ ಬನ್ನಿ. ಹೈಕಮಾಂಡ್ ಒಪ್ಪಿದರೆ ಮಾತ್ರ ಇದು ಎಂದು ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಹೇಳಿದ್ದಾರೆ.
ವಿಧಾನಸೌಧದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವರಾದ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರಿಗೆ ಬಹಿರಂಗ ಸವಾಲು ಹಾಕಿದರು. ಆರೋಪಿಗಳು ನೀವು. ನನ್ನ ಬಗ್ಗೆ ಆರೋಪ ಮಾಡುತ್ತೀರಾ. ತಂದೆ ಸಹಿ ಫೋರ್ಜರಿ ಸಹಿ ಮಾಡಿದವರು. ಎಷ್ಟು 420 ಕೇಸ್ ಗಳಿವೆ. ಬಳ್ಳಾರಿ ಜನರು ನನಗೆ ಪ್ರೀತಿ ತೋರುತ್ತಿದ್ದಾರೆ. ಬನ್ನಿ ಸ್ವಾಮಿ. ಜನತಾ ನ್ಯಾಯಾಲಯಕ್ಕೆ ಹೋಗೋಣ. ನಿಮಗೆ ತಾಕತ್ತಿದ್ದರೆ, ಪಕ್ಷ ಒಪ್ಪಿದರೆ ಜನತಾ ನ್ಯಾಯಾಲಯದಲ್ಲೇ ತೀರ್ಮಾನಿಸೋಣ. ನಾನು ತಪ್ಪು ಮಾಡಿದ್ದರೆ ಸೋಲುತ್ತಾರೆ. ನನ್ನಂಥ ನಾಗೇಂದ್ರರು ಲಕ್ಷಾಂತರ ಜನರು ಇದ್ದಾರೆ ಎಂದು ಗುಡುಗಿದರು.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು. ಚರ್ಚೆಗೆ ಬನ್ನಿ ಎಂದರೂ ಬಿಜೆಪಿಯವರು ಬರಲಿಲ್ಲ. ಬಳ್ಳಾರಿ ಶಾಸಕರು, ಸಂಸದರು ನನ್ನ ಪರವಾಗಿ ನಿಂತರು. ಭರತ್ ರೆಡ್ಡಿ, ಗಣೇಶ್, ತುಕರಾಂ, ಅನ್ನಪೂರ್ಣ ಅವರೂ ಸೇರಿದಂತೆ ಸಚಿವರಾದ ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ರಾಮಾಯಣ ಬರೆದ ಸಮಾಜ. ರಾಮ ಯಾರು ಎಂಬುದು ತೋರಿಸಿದ ಸಮಾಜ. ಯಾರು ಒಳ್ಳೆಯವರು ಕೆಟ್ಟವರು ಎಂಬುದು ಗೊತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿಯವರು ನನ್ನ ವಿರುದ್ಧ ಎಷ್ಟೇ ಷಡ್ಯಂತ್ರ ರೂಪಿಸಿದರೂ, ದುಷ್ಟ
ಶಕ್ತಿಗಳು ಸಂಚು ರೂಪಿಸಿದರೂ ರಾಜಕೀಯವಾಗಿ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
- B Nagendra
- B Nagendra statement
- BJP vs Congress Karnataka
- Cauvery Farmers Issue
- Congress Minister Nagendra
- Karnataka Drought
- Karnataka Politics
- KPSC scam
- Opposition politics
- Vidhana Soudha
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಶಾಸಕ
- ಕಾವೇರಿ ರೈತರ ಸಮಸ್ಯೆ
- ಕೆಪಿಎಸ್ಸಿ ಹಗರಣ
- ಬರಗಾಲ ಸಮಸ್ಯೆ
- ಬಿ ನಾಗೇಂದ್ರ
- ಬಿಜೆಪಿ ವಾಗ್ದಾಳಿ
- ರಾಜೀನಾಮೆ ಚರ್ಚೆ
- ವಿಧಾನಸೌಧ
- ವಿರೋಧ ಪಕ್ಷಗಳ ರಾಜಕಾರಣ





Leave a comment