ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೈವೇಯಲ್ಲಿ ತುಮಕೂರು ಮೂಲದ ವ್ಯಕ್ತಿ ದರೋಡೆ ಮಾಡಿದ್ದ ಐವರು ಡಕಾಯಿತರು ಸಿಕ್ಕಿ ಬಿದ್ದಿದ್ದಾದರೂ ಹೇಗೆ ಗೊತ್ತಾ…?

On: November 7, 2023 2:30 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:07-11-2023

ದಾವಣಗೆರೆ: ತಾಲೂಕಿನ ಆನಗೋಡು ಸಮೀಪದ ಹೈವೆೇ ರಸ್ತೆ ಪಕ್ಕದಲ್ಲಿನ ಸರ್ವೀಸ್ ರಸ್ತೆಯಲ್ಲಿ ಆಟೋದಲ್ಲಿ ಬಂದು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಮೊಬೈಲ್ ಸರ್ವಿಸ್ ಕೆಲಸ ಮಾಡುತ್ತಿದ್ದ ಕುಮಾರ್ (26), ಆಟೋ ಚಾಲಕ (24), ಅಣಬೇರು ಗ್ರಾಮದ ಚಾಲಕ ಪ್ರವೀಣ್ ಕುಮಾರ್ (22), ಪರಶುರಾಮ (19) ಹಾಗೂ ಬಾಡಾ ಗ್ರಾಮದ ಡಿ. ಶಿವಕುಮಾರ (21) ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ ಏನು…?

ಅಕ್ಟೋಬರ್ 31ರಂದು ಬೆಳ್ಳಂಬೆಳಿಗ್ಗೆ 1. 30ರ ಸುಮಾರಿನಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಮಾದಿಹಳ್ಳಿ ಗ್ರಾಮದ ವಾಸಿ ಎ. ಎಂ. ಸುರೇಶ್ ಎಂಬುವವರು ತನ್ನ ಸ್ನೇಹಿತ ಪ್ರದೀಪ ಅಮಿತ್ ಅವರೊಂದಿಗೆ
ಖರೀದಿಸಿದ್ದ ಹೊಸ ಮಹೇಂದ್ರ ಜಿತೋ ಪ್ಲಸ್ ಗೂಡ್ಸ್ ವಾಹನಕ್ಕೆ ಬಾಡಿ ಕಟ್ಟಿಸಿಕೊಂಡು ಬರಲು ಚಿಕ್ಕನಾಯಕನಹಳ್ಳಿಯಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದರು. ಆಗ ದಾವಣಗೆರೆ ತಾಲ್ಲೂಕು ಆನಗೋಡ ಹತ್ತಿರ ಹೈವೇ ರಸ್ತೆಪಕ್ಕದಲ್ಲಿನ ಸರ್ವೀಸ್ ರಸ್ತೆಯಲ್ಲಿ ಮೂತ್ರವಿಸರ್ಜನೆಗೆಂದು ವಾಹನ ನಿಲ್ಲಿಸಿದರು.

ಈ ವೇಳೆ ಇದ್ದಕ್ಕಿದ್ದಂತೆ ದಾಳಿ ಮಾಡಿದ ಐದರಿಂದ ಆರು ದುಷ್ಕರ್ಮಿಗಳು ಆಟೋವೊಂದರಲ್ಲಿ ಬಂದು ಸುರೇಶ್ ಹಾಗೂ ಅವರ ಸ್ನೇಹಿತರಿಗೆ ಚಾಕು ತೋರಿಸಿ 15 ಸಾವಿರ ರೂಪಾಯಿ ನಗದು, 20 ಸಾವಿರ ರೂಪಾಯಿ ಮೌಲ್ಯದ ಎರಡು ರೆಡ್ ಮಿ
ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಸುರೇಶ್ ಅವರು ದಾವಣಗೆರೆ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟಿದ್ದರು. ಸ್ಥಳಕ್ಕೆ ಕೂಡಲೇ ಎಸ್ಪಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು.

ಆರೋಪಿಗಳ ಪತ್ತೆಗೆ ಡಿಸಿಆರ್‌ಬಿ ಡಿವೈಎಸ್ಪಿ ಬಿ. ನಾಗಪ್ಪ ಮತ್ತು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ. ಎಸ್. ಅವರ ನೇತೃತ್ವದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ವಿಶೇಷ ತಂಡವು ಹಿರಿಯ ಅಧಿಕಾರಿಗಳ ಮಾರ್ಗದದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು, ನವೆಂಬರ್ 6 ರಂದು ದಾವಣಗೆರೆ ಹೆದ್ದಾರಿ 48ರಲ್ಲಿನ ದರೋಡೆ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಒಂದು ಆಟೋ, ಒಂದು ಚಾಕು, 5100 ರೂಪಾಯಿ ನಗದು ಹಣ, 20 ಸಾವಿರ ರೂಪಾಯಿ ಮೌಲ್ಯದ ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಶಪಡಿಸಿಕೊಂಡು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆರೋಪಿಗಳಲ್ಲಿ ಕುಮಾರ, ಮಂಜುನಾಥ, ಪ್ರವೀಣ್ ಕುಮಾರ ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ ಎಸ್., ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್, ಪಿಎಸ್‌ಐ ಜೋವಿತ್ ರಾಜ್ ಮತ್ತು ಸಿಬ್ಬಂದಿ ಮಜೀದ್ ಕೆ ಸಿ, ಆಂಜನೇಯ, ಸುರೇಶ್, ಮಾರುತಿ, ರಾಘವೇಂದ್ರ, ರಮೇಶ್ ನಾಯ್ಕ್, ಅಶೋಕ, ಬಾಲಾಜಿ, ನಟರಾಜ್, ಅಣ್ಣಯ್ಯ, ಮಹೇಶ, ವಿಶ್ವನಾಥ, ಶಾಂತರಾಜು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ ಅವರು ಅಭಿನಂದಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment