SUDDIKSHANA KANNADA NEWS/ DAVANAGERE/ DATE:14-08-2023
ದಾವಣಗೆರೆ: ದೇವಸ್ಥಾನದ ಹುಂಡಿ ಹಣ ಕಳವು ಮಾಡಿದ ಆರೋಪಿಯನ್ನು ಜಗಳೂರು (Jagalur) ಪೊಲೀಸರು ಬಂಧಿಸಿದ್ದಾರೆ.
ಜಗಳೂರು (Jagalur) ತಾಲೂಕಿನ ಕೂಲಿ ಕಾರ್ಮಿಕ 47 ವರ್ಷದ ಹನುಮಂತ ಅಲಿಯಾಸ್ ಲಂಕೆ ಹನುಮಂತ ಬಂಧಿತ ಆರೋಪಿ. ಕಳೆದ ಆಗಸ್ಟ್ 5 ರ ರಾತ್ರಿ ರಾತ್ರಿ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗೋಡೆಯಲ್ಲಿ ಅಳವಡಿಸಿದ್ದ ಹುಂಡಿಯನ್ನು ಯಾರೋ ಕಳ್ಳರು ಹೊಡೆದು ಸುಮಾರು 30,000 ರೂ. ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ:
Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್.ಬಸವರಾಜರ ಮಾರ್ಗದರ್ಶನದಲ್ಲಿ ಜಗಳೂರು ಠಾಣೆಯ ಪಿಐ ಶ್ರೀನಿವಾಸರಾವ್ ನೇತೃತ್ವದಲ್ಲಿ ಪಿಎಸ್ಐ ಸಾಗರ್ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿರವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯಿಂದ 8065 ರೂ, ಒಂದು ಕಬ್ಬಿಣದ ರಾಡು, ಒಂದು ಗೋಡೆ ಗಡಿಯಾರ ವಶಕ್ಕೆ ಪಡೆಯಲಾಗಿದೆ. ಆರೋಪಿ ಪತ್ತೆ ಹಚ್ಚಿದ ಜಗಳೂರು (Jagalur) ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಶ್ರೀನಿವಾಸ ರಾವ್, ಪಿಎಸ್ ಐ ಸಾಗರ್.ಎಸ್.ಡಿ., ಸಿಬ್ಬಂದಿ ವರ್ಗದವರಾದ ಶ್ರೀನಿವಾಸ, ನಾಗಭೂಷಣ, ಬಸವರಾಜ, ಬಿ. ಮಾರೆಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರು ಅಭಿನಂದಿಸಿದ್ದಾರೆ.