SUDDIKSHANA KANNADA NEWS/ DAVANAGERE/ DATE:15-02-2024
ದಾವಣಗೆರೆ: ಪ್ರಸಕ್ತ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯಾನ್ ಜನಾಂಗಕ್ಕೆ ಸೇರಿದವರು ಸ್ವಯಂ ಉದ್ಯೋಗ ಯೋಜನೆಗೆ ಸಾಲ, ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯ ವಿವರ: ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಪಡೆಯಬಹುದು. ಘಟಕದ ವೆಚ್ಚದ ಶೇ.33 ರಷ್ಟು ಅಥವಾ ಗರಿಷ್ಠ ಮಿತಿ ರೂ.1 ಲಕ್ಷದ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಫೆ.29 ಕೊನೆಯ ದಿನವಾಗಿರುತ್ತದೆ. ಅರ್ಜಿಯನ್ನು ವೆಬ್ ಸೈಟ್ ವಿಳಾಸ https://kmdconline.karnataka.