SUDDIKSHANA KANNADA NEWS/ DAVANAGERE/ DATE:10-02-2024
ದಾವಣಗೆರೆ: :ಪ್ರಸಕ್ತ ಸಾಲಿನ ಶೆ.24.10%, 7.25% ಮತ್ತು 5% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ದೈಹಿಕ ವಿಕಲಚೇತನರ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಫೆ.23 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ
ತಿಳಿಸಿದ್ದಾರೆ.
ಭಾರತೀಯ ಸಂಜ್ಞೆ ಭಾಷೆ ತರಬೇತಿ
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಕಿವುಡರ ಸಂಘ ದಾವಣಗೆರೆ ಇವರುಗಳÀ ವತಿಯಿಂದ ಫೆ. 12 ಮತ್ತು 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಸಿ.ಆರ್.ಸಿ.ಕೇಂದ್ರ ಆವರಣದಲ್ಲಿರುವ ವಿಕಲಚೇತನರ ಕೌಶಲ್ಯ ಭವನದಲ್ಲಿ ಮಹಾನಗರ ಪಾಲಿಕೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪೋಷಕರಿಗೆ ಭಾರತೀಯ ಸಂಜ್ಞೆಭಾಷೆ ತರಬೇತಿ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಕಾರ್ಯಗಾರವನ್ನು ಜಿಲ್ಲಾಧಿಕಾರಿ ಡಾ ಎಂ.ವಿ.ವೆಂಕಟೇಶ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕ, ಸಿ.ಆರ್.ಸಿ.ಕೇಂದ್ರ ನಿರ್ದೇಶಕರಾದ ಮೀನಾಕ್ಷಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಕೆ.ಕೆ ಪ್ರಕಾಶ್, ಜಿಲ್ಲಾ ಕಿವುಡ ಸಂಘದ ಅಧ್ಯಕ್ಷರಾದ ಅಸೀಫ್.ಎ. ಭಾಗವಹಿಸುವರು.