ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಯುವ ಪರಿವರ್ತಕರು ಹಾಗೂ ಸಮಾಲೋಚಕ ಆಯ್ಕೆಗೆ ಅರ್ಜಿ ಆಹ್ವಾನ

On: February 18, 2025 3:30 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-02-2025

ಶಿವಮೊಗ್ಗ: ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಜನ ಆರೋಗ್ಯ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಹಾಗೂ ಸಮಾಲೋಚಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನಾಂಕವಾಗಿದ್ದು, ಪ್ರಸ್ತುತ 3 ಯುವ ಪರಿವರ್ತಕರು ಮತ್ತು 1 ಯುವ ಸಮಾಲೋಚಕರ ಹುದ್ದೆ ಖಾಲಿ ಇದ್ದು, ಪದವಿ ಒಳಗೊಂಡಂತೆ ಸೈಕಾಲಜಿ, ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ಯುವ ಪರಿವರ್ತಕರ ಹುದ್ದೆಗೆ ಕನಿಷ್ಠ 21 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಇರಬೇಕು. ಇವರಿಗೆ ಗೌರವಧನವಾಗಿ ರೂ. 7 ಸಾವಿರ ನೀಡಲಿದ್ದು, ಪ್ರತಿ ಜಿಲ್ಲೆ ಓರ್ವ ಯುವ ಸಮಾಲೋಚಕರನ್ನು ಆಯ್ಕೆ ಮಾಡಲಾಗುತ್ತದೆ.

ಯುವ ಸಮಾಲೋಚಕರ ಹುದ್ದೆಗೆ 21 ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದ್ದು ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯ, ಸಮುದಾಯದಲ್ಲಿ ಕೆಲಸ ಮಾಡುವ ಆಸಕ್ತಿ, ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಹೊಂದಿರಬೇಕು ರೂ.9000 ಗೌರವಧನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಗರದ ನೆಹರು ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment