SUDDIKSHANA KANNADA NEWS/ DAVANAGERE/ DATE:04-02-2024
ದಾವಣಗೆರೆ: ಆಧುನಿಕ ಜಗತ್ತಿನಲ್ಲಿ ಹೊಸ ತಂತ್ರಜ್ಙಾನಕ್ಕೆ ಹೊಂದಿಕೊಂಡು ಶಿಕ್ಷಣ ಪಡೆದವನೇ ಶ್ರೀಮಂತ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತರಾಗಬೇಕು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಕರೆ ನೀಡಿದರು.
ನಗರದ ಎಸ್ ಎಂ ಕೃಷ್ಣ ಬಡಾವಣೆಯ ವಿದ್ಯಾಜೋತಿ ಕಾನ್ವೆಂಟ್ ನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಎಂಬ ಹುಲಿಯ ಹಾಲನ್ನು ಕುಡಿದವರು ಸಮಾಜದಲ್ಲಿ ಘರ್ಜಿಸಲೇಬೇಕು. ಮುಂದೊಂದು ದಿನ ಶಿಕ್ಷಣವಿಲ್ಲದವರನ್ನ ನಿರ್ಜೀವ ವಸ್ತುಗಳಂತೆ ನೋಡುವ ಕಾಲ ದೂರವಿಲ್ಲ. ನಮ್ಮ ಬಡತನಕ್ಕೆ ಮೂಲ ಔಷಧಿ ಶಿಕ್ಷಣ ಎಂಬುದು ಮರೆಯುವಂತಿಲ್ಲ ಎಂದು ಹೇಳಿದರು.
ಯಶಸ್ವಿ ಉದ್ಯಮಿಯಾಗಿ ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ತೆರಿಗೆ ಕಟ್ಡುವ ಎಂ.ಆನಂದ್ ರವರು ಸಮಾಜಮುಖಿ ಕಾರ್ಯವಾದ ಶಿಕ್ಷಣ ಸಂಸ್ಥೆಯನ್ನ ಶೋಷಿತ ಬಡಾವಣೆಯಲ್ಲಿ ಸ್ಥಾಪಿಸಿ ಉತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಬಾಡದ ಆನಂದರಾಜ್ ಸಂತೋಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಾಮದೇವಪ್ಪ, ಹಿರಿಯ ಪತ್ರಕರ್ತ ಮಂಜುನಾಥ ಗೌರಕ್ಕಳವರ್, ಪಾಲಿಕೆ ಸದಸ್ಯೆ ಶ್ರೀಮತಿ ಮಂಜುನಾಥ್, ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ರೂಪಾ ಆನಂದ್, ಉದ್ಯಮಿಗಳಾದ ಆನಂದ್, ಅನಿಷ್ ಪಾಷಾ, ಗುಡ್ಡೇಶ್, ಸಿದ್ದಲಿಂಗಪ್ಪ, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.