Home ದಾವಣಗೆರೆ 10ನೇ ತರಗತಿ ಬಾಲಕಿಯ ಮೇಲೆ ಭೀಕರ ದಾಳಿ: ಕೈ ತುಂಡಾದ ವಿದ್ಯಾರ್ಥಿನಿ ಬೆಂಗಳೂರಿಗೆ ರವಾನೆ, ಸಹಪಾಠಿ ರಕ್ಷಿಸಿದ ಧೀರ ಬಾಲಕಿಗೆ ಶೌರ್ಯ ಪ್ರಶಸ್ತಿ ಶಿಫಾರಸು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

10ನೇ ತರಗತಿ ಬಾಲಕಿಯ ಮೇಲೆ ಭೀಕರ ದಾಳಿ: ಕೈ ತುಂಡಾದ ವಿದ್ಯಾರ್ಥಿನಿ ಬೆಂಗಳೂರಿಗೆ ರವಾನೆ, ಸಹಪಾಠಿ ರಕ್ಷಿಸಿದ ಧೀರ ಬಾಲಕಿಗೆ ಶೌರ್ಯ ಪ್ರಶಸ್ತಿ ಶಿಫಾರಸು!

Share
ಬಾಲಕಿ
Share

ಅನಂತಪುರ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಪ್ತಾಡು ಜಿಪಂ ಪ್ರೌಢಶಾಲೆಯ ತರಗತಿ ಕೊಠಡಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಚೈನ್‌ಸಾದಿಂದ ಭೀಕರ ದಾಳಿ ನಡೆಸಿದ್ದಾನೆ. ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿಯ ಬಲಗೈ ಸಂಪೂರ್ಣವಾಗಿ ತುಂಡಾಗಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಭೀಕರ ಘಟನೆಯಲ್ಲಿ ತನ್ನ ಸಹಪಾಠಿಯನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ದಲಿತ ವಿದ್ಯಾರ್ಥಿನಿಗೂ ಗಾಯಗಳಾಗಿದ್ದು, ಆಕೆಗೆ ಅನಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆರೋಗ್ಯ ಸ್ಥಿತಿ ಬಿಕಟ್ಟಿನಲ್ಲಿದೆ: ಸಂತ್ರಸ್ತ ಬಾಲಕಿಗೆ ತಲೆಯ ಬುರುಡೆ, ಕುತ್ತಿಗೆ, ಮುಖ, ಪಕ್ಕಟೆ ಮೂಳೆಗಳು ಮುರಿದಿದ್ದು, ಅಪಾರ ಪ್ರಮಾಣದ ರಕ್ತಸ್ರಾವವಾದ್ದರಿಂದ 10 ಯೂನಿಟ್ ರಕ್ತ ನೀಡಲಾಗಿದೆ.

ಶೌರ್ಯ ಪ್ರಶಸ್ತಿ ಶಿಫಾರಸು: ಸ್ನೇಹಿತೆಯನ್ನು ರಕ್ಷಿಸಲು ಜೀವದ ಹದಗೆಟ್ಟು ಹೋರಾಡಿದ ಎರಡನೇ ಬಾಲಕಿಯ ಧೈರ್ಯವನ್ನು ಮೆಚ್ಚಿ ಪ್ರಧಾನಮಂತ್ರಿ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಸರ್ಕಾರದಿಂದ ಸಂಪೂರ್ಣ ವೆಚ್ಚ: ಸಂತ್ರಸ್ತ ಬಾಲಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಆಂಧ್ರಪ್ರದೇಶ ಸರ್ಕಾರವೇ ಭರಿಸಲಿದ್ದು, ಸಿಎಂ ಚಂದ್ರಬಾಬು ನಾಯ್ಡು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಯೋಗದೊಂದಿಗೆ ಗ್ರೀನ್ ಕಾರಿಡಾರ್ ನಿರ್ಮಿಸಿ ಬಾಲಕಿಯನ್ನು ಬೆಂಗಳೂರಿಗೆ ರವಾನಿಸಲಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles