Home ಕ್ರೈಂ ನ್ಯೂಸ್ ‘ಸರ್ ತನ್ ಸೆ ಜುದಾ’ ಘೋಷಣೆ ದೇಶದ ಸಾರ್ವಭೌಮತೆಗೆ ಸವಾಲು: ಇದು ‘ಜೈ ಶ್ರೀ ರಾಮ್’ ಅಥವಾ ‘ಅಲ್ಲಾಹು ಅಕ್ಬರ್’ಗೆ ಸಮಾನವಲ್ಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಸರ್ ತನ್ ಸೆ ಜುದಾ’ ಘೋಷಣೆ ದೇಶದ ಸಾರ್ವಭೌಮತೆಗೆ ಸವಾಲು: ಇದು ‘ಜೈ ಶ್ರೀ ರಾಮ್’ ಅಥವಾ ‘ಅಲ್ಲಾಹು ಅಕ್ಬರ್’ಗೆ ಸಮಾನವಲ್ಲ!

Share
ಸರ್ ತನ್ ಸೆ ಜುದಾ
Share

ಪ್ರಯಾಗ್‌ರಾಜ್: ‘ಸರ್ ತನ್ ಸೆ ಜುದಾ’ ಘೋಷಣೆಯು ಧಾರ್ಮಿಕ ಜಪ ಅಥವಾ ಘೋಷಣೆಗಳಿಗೆ ಸಮಾನವಲ್ಲ ಮತ್ತು ಇದನ್ನು ವಾಕ್ ಸ್ವಾತಂತ್ರ್ಯದಡಿ ರಕ್ಷಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

2025ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮೌಲಾನಾ ತೌಕೀರ್ ರಜಾ ಖಾನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಮಹತ್ವದ ವಿಚಾರದ ಬಗ್ಗೆ ಕೂಲಂಕುಶವಾಗಿ ಪರಿಗಣಿಸಿದೆ.

ಜಸ್ಟಿಸ್ ಅಶೋತ್ ಶ್ರೀವಾಸ್ತವ ಅವರ ಏಕಸದಸ್ಯ ಪೀಠವು ಈ ಆದೇಶವನ್ನು ನೀಡಿದ್ದು, ‘ಜೈ ಶ್ರೀ ರಾಮ್’, ‘ಹರ್ ಹರ್ ಮಹಾದೇವ್’ ಅಥವಾ ‘ಅಲ್ಲಾಹು ಅಕ್ಬರ್’ ನಂತಹ ಧಾರ್ಮಿಕ ಘೋಷಣೆಗಳು ದೇವರ ಮೇಲಿನ ಭಕ್ತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತವೆ ಎಂದು ತಿಳಿಸಿದೆ. ಆದರೆ, ‘ಸರ್ ತನ್ ಸೆ ಜುದಾ’ ಘೋಷಣೆಯು ದೇಶದ ಕಾನೂನು ವ್ಯವಸ್ಥೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಸವಾಲು ಹಾಕುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹಿನ್ನೆಲೆ ಏನು?

2025ರ ಸೆಪ್ಟೆಂಬರ್ 26 ರಂದು ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ವಿವಾದದ ಹಿನ್ನೆಲೆಯಲ್ಲಿ ಭುಗಿಲೆದ್ದ ಪ್ರತಿಭಟನೆ ಮತ್ತು ಘರ್ಷಣೆಯ ಸಂದರ್ಭದಲ್ಲಿ ಮೌಲಾನಾ ತೌಕೀರ್ ರಜಾ ಖಾನ್ ನಿರ್ದೇಶನದ ಮೇರೆಗೆ ಗುಂಪೊಂದು ಪೊಲೀಸ್ ತಂಡಗಳ ಮೇಲೆ ದಾಳಿ ನಡೆಸಿತ್ತು ಮತ್ತು ‘ಸರ್ ತನ್ ಸೆ ಜುದಾ’ ಘೋಷಣೆಗಳನ್ನು ಕೂಗಿತ್ತು. ಈ ಗಲಭೆಯಲ್ಲಿ ಹಲವು ಪೊಲೀಸರು ಗಾಯಗೊಂಡು ಸಾರ್ವಜನಿಕ ಆಸ್ತಿಗೆ ಹಾನಿಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ತೌಕೀರ್ ರಜಾ ಖಾನ್ ಅಕ್ಟೋಬರ್ 2025ರಿಂದ ಜೈಲಿನಲ್ಲಿದ್ದಾರೆ.

ಅಂಥ ಪ್ರಚೋದನಕಾರಿ ಘೋಷಣೆಗಳು ಸಮಾಜದಲ್ಲಿ ಹಿಂಸಾಚಾರ ಮತ್ತು ದಂಗೆಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದ್ದು, ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ರಕ್ಷಣೆ ಇದರ ಅಡಿಯಲ್ಲಿ ಸಿಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles