Home ಕ್ರೈಂ ನ್ಯೂಸ್ ಮಹಿಳೆಯರ ಚಾರಿತ್ರ್ಯ ವಧೆ ಯಾವಾಗ ನಿಲ್ಲುತ್ತದೆ? ತಮಿಳುನಾಡು ನಟಿ ತ್ರಿಶಾ ವಿವಾದದ ಬಗ್ಗೆ ಕಂಗನಾ ರಣಾವತ್ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಮಹಿಳೆಯರ ಚಾರಿತ್ರ್ಯ ವಧೆ ಯಾವಾಗ ನಿಲ್ಲುತ್ತದೆ? ತಮಿಳುನಾಡು ನಟಿ ತ್ರಿಶಾ ವಿವಾದದ ಬಗ್ಗೆ ಕಂಗನಾ ರಣಾವತ್ ಆಕ್ರೋಶ!

Share
ಕಂಗನಾ ರಣಾವತ್
Share

ಹೊಸದೆಹಲಿ/ಕುಲ್ಲು: ಮಹಿಳೆಯರನ್ನು ರಾಜಕೀಯವಾಗಿ ಅಥವಾ ಸಾರ್ವಜನಿಕವಾಗಿ ತೇಜೋವಧೆ ಮಾಡಲು ಅವರ “ಚಾರಿತ್ರ್ಯದ ಮೇಲೆ ದಾಳಿ ಮಾಡುವುದು” ಹಳೆಯ ಚಾಳಿಯಾಗಿದೆ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಕಳವಳ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ನಟಿ ತ್ರಿಶಾ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅವರು, ಸಮಾಜವು ಮಹಿಳೆಯರನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಮಾತನಾಡಿ, ಮಹಿಳೆಯರ ವಿರುದ್ಧ ಅಶಿಸ್ಪದ ಹೇಳಿಕೆಗಳು ಅಥವಾ ವೈಯಕ್ತಿಕ ದಾಳಿ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್, ಯಶಸ್ವಿ ಮಹಿಳೆಯರು, ನಾಯಕಿಯರು ಅಥವಾ ನಟಿಯರನ್ನು ಗುರಿಯಾಗಿಸಿ ಅವರ ಚಾರಿತ್ರ್ಯವನ್ನು ಹಳಿಯುವ ಪ್ರವೃತ್ತಿ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles