Home ಕ್ರೈಂ ನ್ಯೂಸ್ ಪತಿ, ಅತ್ತೆಯ ಕಾಟಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಆರೋಪಿಗಳು ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪತಿ, ಅತ್ತೆಯ ಕಾಟಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಆರೋಪಿಗಳು ಅರೆಸ್ಟ್!

Share
ಪತಿ
Share

ಬಳ್ಳಾರಿ: ಪತಿ ಹಾಗೂ ಅತ್ತೆಯ ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ತವರು ಮನೆಯಲ್ಲಿಯೇ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ.

ಐಶ್ವರ್ಯ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಶುಸಂಗೋಪನೆ ಇಲಾಖೆಯ ವೈದ್ಯ ಪ್ರದೀಪ್ ಕುಮಾರ್ ಎಂಬಾತ ಐಶ್ವರ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಪ್ರೀತಿಯ ಜಾಲಕ್ಕೆ ಬಿದ್ದು ಬಂದ ಯುವತಿಗೆ ಮದುವೆಯಾದ ದಿನದಿಂದಲೇ ನರಕದರ್ಶನ ಶುರುವಾಗಿತ್ತು ಎನ್ನಲಾಗಿದೆ.

ಅತ್ತೆಯ ಕಿರುಕುಳ, ಪತಿಯ ಮೌನ:

ಮದುವೆಯಾದಾಗಿನಿಂದ ಅತ್ತೆ ಐಶ್ವರ್ಯಾಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅತ್ತೆ ಇಷ್ಟೆಲ್ಲಾ ಟಾರ್ಚರ್ ಕೊಡುತ್ತಿದ್ದರೂ, ಪತಿ ಪ್ರದೀಪ್ ಕುಮಾರ್ ಮಾತ್ರ ಹೆಂಡತಿಯ ಬೆಂಬಲಕ್ಕೆ ನಿಲ್ಲದೆ ಮೂಕಪ್ರೇಕ್ಷಕನಾಗಿದ್ದ ಎನ್ನಲಾಗಿದೆ. ಇವರ ಕಿರುಕುಳ ತಾಳಲಾರದೇ ನೊಂದ ಐಶ್ವರ್ಯ ಕಂಪ್ಲಿಯಲ್ಲಿದ್ದ ತನ್ನ ತವರು ಮನೆಗೆ ಬಂದಿದ್ದಳು. ಆದರೆ, ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಆಕೆ ಕೊನೆಗೆ ಆತ್ಮಹತ್ಯೆಯೇ ಇದಕ್ಕೆ ಕೊನೆ ದಾರಿ ಎಂದು ನಿರ್ಧರಿಸಿ ನೇಣಿಗೆ ಶರಣಾಗಿದ್ದಾಳೆ.

ಡೆತ್‌ನೋಟ್ ಪತ್ತೆ – ಆರೋಪಿಗಳ ಬಂಧನ:

ಸಾವು ಸನಿಹದಲ್ಲಿದ್ದರೂ ಧೈರ್ಯ ಮಾಡಿ ತನ್ನ ಸಾವಿಗೆ ಪತಿ ಮತ್ತು ಅತ್ತೆಯೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಐಶ್ವರ್ಯ ಪ್ರಾಣ ಬಿಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಶ್ವರ್ಯ ಬರೆದಿಟ್ಟಿರುವ ಡೆತ್‌ನೋಟ್ ಆಧರಿಸಿ ಕಂಪ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಆರೋಪಿ ಪತಿ ಡಾ. ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯನ್ನು (ಅತ್ತೆ) ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಪ್ರೀತಿಯ ಹೆಸರಿನಲ್ಲಿ ವಂಚಿಸಿ ಜೀವ ಹಿಂಡಿದ ಪತಿಯ ಕ್ರೌರ್ಯಕ್ಕೆ ಕಂಪ್ಲಿ ಪಟ್ಟಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *