(Spam Detection) ಇತ್ತೀಚಿಗೆ ಸಾಮನ್ಯವಾಗಿ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸ್ಪ್ಯಾಮ್ ಕರೆ ಹಾಗೂ SMS ಕೂಡ ಒಂದು. ಈ ಸ್ಪ್ಯಾಮ್ ಕರೆಯನ್ನು ತಡೆಗಟ್ಟಲು ಹಲವಾರು ಜನ ಟ್ರೂ ಕಾಲರ್ ಮೊರೆ ಹೋಗಿದ್ದಾರೆ. ಹೆಚ್ಚಿನ ಜನರು ಟ್ರೂ ಕಾಲರ್ ಮೂಲಕ ಇನ್ನೊಂದು ಕಡೆಯಿಂದ ಯಾರು ಕರೆ ಮಾಡುತ್ತಿದ್ದಾರೆಂದು ತಿಳಿಯುತ್ತಾರೆ.
ಆದರೆ, ಇದೀಗ ಏರ್ಟೆಲ್ ಬಳಕೆದಾರರಿಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಧನವನ್ನು ತಂದಿದೆ. ಭಾರತದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸ್ಪ್ಯಾಮ್ ಪತ್ತೆ ಸೇವೆಯನ್ನು ಬುಧವಾರ ಪ್ರಾರಂಭಿಸಲಾಗಿದ್ದು, ಗುರುವಾರದಿಂದ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಉಪಕರಣದ ಸಹಾಯದಿಂದ ಗ್ರಾಹಕರಿಗೆ ರಿಯಲ್ ಟೈಮ್ ನಲ್ಲಿಯೇ ಸ್ಪ್ಯಾಮ್ ಕರೆಗಳು ಮತ್ತು ಎಸ್ಎಮ್ಎಸ್ ಬಗ್ಗೆ ಎಚ್ಚರಿಕೆ ಪಡೆಯುತ್ತಾರೆ. ಬಳಕೆದಾರರು ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡದೆಯೇ ಎಲ್ಲಾ ಏರ್ಟೆಲ್ ಗ್ರಾಹಕರಿಗೆ ಈ ಸೇವೆಯನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ.
ಏರ್ ಟೆಲ್ ತಂದಿರುವ ಈ ಹೊಸ ಟೂಲ್ ನಲ್ಲಿ ಡ್ಯುಯಲ್ ಲೇಯರ್ ಪ್ರೊಟೆಕ್ಷನ್ ನೀಡಲಾಗಿದೆ. ಒಂದು ನೆಟ್ವರ್ಕ್ ಲೇಯರ್ ನಲ್ಲಿದೆ ಮತ್ತು ಇನ್ನೊಂದು ಐಟಿ ಸಿಸ್ಟಮ್ಸ್ ಲೇಯರ್ ನಲ್ಲಿದೆ. ಪ್ರತಿ ಕರೆ, ಎಸ್ಎಮ್ಎಸ್ ಈ ಡ್ಯುಯಲ್ ಲೇಯರ್ಡ್ ಅಲ್ ಶೀಲ್ಡ್ ಮೂಲಕ ಹೋಗುತ್ತದೆ. ಇದು ಪ್ರತಿದಿನ 1.5 ಬಿಲಿಯನ್ ಸಂದೇಶಗಳನ್ನು ಮತ್ತು 2.5 ಬಿಲಿಯನ್ ಕರೆಗಳನ್ನು ಪ್ರಕ್ರಿಯೆಗೊಳಿಸುತ್ತದೆ.
SMS ಮೂಲಕ ಕಳುಹಿಸಲಾದ ದುರುದ್ದೇಶಪೂರಿತ ಲಿಂಕ್ಗಳ ಬಗ್ಗೆ ಸಾಫ್ಟ್ವೇರ್ ಬಳಕೆದಾರರನ್ನು ಎಚ್ಚರಿಸುತ್ತದೆ. ಇದಕ್ಕಾಗಿ, ಬ್ಲಾಕ್ ಲಿಸ್ಟ್ ಮಾಡಲಾದ URL ಗಳನ್ನು ಪ್ರತಿ SMS ಕೇಂದ್ರೀಕೃತ ಡೇಟಾಬೇಸ್ ಮೂಲಕ ನೈಜ-ಸಮಯದ ಆಧಾರದ ಮೇಲೆ ಸ್ಕ್ಯಾನ್ ಮಾಡಲಾಗುತ್ತದೆ.