Home ಕ್ರೈಂ ನ್ಯೂಸ್ ಕಚೇರಿ ಕುರ್ಚಿಯಲ್ಲೇ ರೈಲ್ವೆ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಸಿಂಗ್ ಸಾವು: ಹಿರಿಯ ಅಧಿಕಾರಿಯ ಕಿರುಕುಳವೇ ಕಾರಣವೆಂದು ಕುಟುಂಬ ಆರೋಪ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಚೇರಿ ಕುರ್ಚಿಯಲ್ಲೇ ರೈಲ್ವೆ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಸಿಂಗ್ ಸಾವು: ಹಿರಿಯ ಅಧಿಕಾರಿಯ ಕಿರುಕುಳವೇ ಕಾರಣವೆಂದು ಕುಟುಂಬ ಆರೋಪ

Share
ರೈಲ್ವೆ
Share

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ  ಕಚೇರಿಯ ಕೊಠಡಿಯಲ್ಲಿ ಭಾರತೀಯ ರೈಲ್ವೆಯ ಸಹಾಯಕ ಕಾರ್ಯಾಚರಣೆ ವ್ಯವಸ್ಥಾಪಕ ಅಭಿಷೇಕ್ ಸಿಂಗ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ರವಿವಾರ ರಾತ್ರಿ ಈ ದಾರುಣ ಘಟನೆ ನಡೆದಿದ್ದು, ಹಿರಿಯ ಅಧಿಕಾರಿಯ ಮಾನಸಿಕ ಕಿರುಕುಳ ಹಾಗೂ ನಿರಂತರ ಒತ್ತಡವೇ ಅವರ ಸಾವಿಗೆ ಕಾರಣ ಎಂದು ಮೃತರ ತಾಯಿ ಹಾಗೂ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಅಭಿಷೇಕ್ ಸಿಂಗ್ ಅವರು ರವಿವಾರ ಎಂದಿನಂತೆ ಕರ್ತವ್ಯಕ್ಕೆ ತೆರಳಿ ಮಧ್ಯಾಹ್ನ ಮನೆಗೆ ವಾಪಸಾಗಿದ್ದರು. ನಂತರ ಡೈರಿ ತೆಗೆದುಕೊಂಡು ಮತ್ತೆ ಕಚೇರಿಗೆ ತೆರಳಿದವರು ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಬಂದಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ರಾತ್ರಿ 10 ಗಂಟೆ ಸುಮಾರಿಗೆ ಡಿಆರ್‌ಎಂ ಕಚೇರಿಗೆ ಬಂದು ನೋಡಿದಾಗ, ಅಭಿಷೇಕ್ ಸಿಂಗ್ ಅವರು ತಮ್ಮ ಕಚೇರಿಯ ಕುರ್ಚಿಯಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿದೆ. ಅವರ ಬಾಯಲ್ಲಿ ನೊರೆ ಬಂದಿದ್ದು, ಸಮೀಪದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಹಿರಿಯ ಅಧಿಕಾರಿಯ ಕಿರುಕುಳ ಆರೋಪ: ಅಭಿಷೇಕ್ ಸಿಂಗ್ ಅವರಿಗೆ ಹಿರಿಯ ಅಧಿಕಾರಿಯೊಬ್ಬರು ರಜೆ ನೀಡದೆ ನಿರಂತರವಾಗಿ ಮಾನಸಿಕ ಒತ್ತಡ ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ತಾಯಿ ಸುಶೀಲಾ ದೇವಿ ಆರೋಪಿಸಿದ್ದಾರೆ.

ಬೆದರಿಕೆ ಹಾಕಿದ ಬಗ್ಗೆ ಪತ್ನಿ ಹೇಳಿಕೆ: ಪ್ರಯಾಗ್‌ರಾಜ್‌ನಿಂದ ನಾಲ್ಕು ತಿಂಗಳ ಹಿಂದಷ್ಟೇ ಆxಗ್ರಾಗೆ ವರ್ಗಾವಣೆಗೊಂಡು ಬಂದಿದ್ದ ಸಿಂಗ್ ಅವರಿಗೆ, ಹೊಸ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಸಮಯ ಕೇಳಿದಾಗ ಹಿರಿಯ ಅಧಿಕಾರಿಯು “ನಿನ್ನ ಜೀವನವನ್ನೇ ಹಾಳು ಮಾಡುವುದಾಗಿ” ಬೆದರಿಕೆ ಹಾಕಿದ್ದರು ಎಂದು ಪತ್ನಿ ಆಸ್ತಾ ತಿಳಿಸಿದ್ದಾರೆ.

ಪೊಲೀಸ್ ತನಿಖೆ ಮುಂದುವರಿಕೆ: ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಸಾವು ಹಾಗೂ ಕಿರುಕುಳದ ಕುರಿತು ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ಆಘಾತದಿಂದ ಅಸ್ವಸ್ಥಗೊಂಡಿರುವ ಮೃತರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles