ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ಶಿವಸೇನಾ (ಯುಬಿಟಿ) ಶಾಸಕ ಅದಿತ್ಯ ಠಾಕ್ರೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂಬ ಹೇಳಿಕೆ ನಿಜಕ್ಕೂ ಖಂಡನಾರ್ಹ, ಕಾಂಗ್ರೆಸ್ ಅಥವಾ ಬಿಜೆಪಿಯೇ ಆಗಲಿ ಮುಂಬೈಯನ್ನು ಮಹರಾಷ್ಟ್ರದಿಂದ ಬೇರ್ಪಡಿಸುವ ಪ್ರಯತ್ನವನ್ನು ಶಿವಸೇನಾ (ಯುಬಿಟಿ) ಎಂದಿಗೂ ಸಹಿಸುವುದಿಲ್ಲ, ಮುಂಬೈ ನಮ್ಮ ಜನ್ಮ ಭೂಮಿ ಇದನ್ನು ಮರಾಠರು ರಕ್ತ ನೀಡಿ ಕಟ್ಟಿದ್ದಾರೆ, ಯಾರೂ ನಮಗೆ ಕೊಟ್ಟಿದ್ದಲ್ಲ ಎಂದು ಕಿಡಿಕಾರಿದರು.