Home ದಾವಣಗೆರೆ ‘OCI ಕಾರ್ಡ್‌ದಾರರಿಗೆ ಭಾರತೀಯ ನಾಗರಿಕರ ಹಕ್ಕಿಲ್ಲ’: ಹೈಕೋರ್ಟ್ ತರಾಟೆ ಬೆನ್ನಲ್ಲೇ ನಟ ಇಮ್ರಾನ್ ಖಾನ್ ಬೇಷರತ್ತು ಕ್ಷಮೆಯಾಚನೆ!
ದಾವಣಗೆರೆಬೆಂಗಳೂರುಸಿನಿಮಾ

‘OCI ಕಾರ್ಡ್‌ದಾರರಿಗೆ ಭಾರತೀಯ ನಾಗರಿಕರ ಹಕ್ಕಿಲ್ಲ’: ಹೈಕೋರ್ಟ್ ತರಾಟೆ ಬೆನ್ನಲ್ಲೇ ನಟ ಇಮ್ರಾನ್ ಖಾನ್ ಬೇಷರತ್ತು ಕ್ಷಮೆಯಾಚನೆ!

Share
ಇಮ್ರಾನ್ ಖಾನ್
Share

ಮುಂಬೈ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್, ಮುಂಬೈ ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ಯಾವುದೇ ರಾಜಕೀಯ ಅಥವಾ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕೋರ್ಟ್‌ಗೆ ಪ್ರಮಾಣಪತ್ರ ನೀಡಲು ಸಮ್ಮತಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಂ. ಸಿ. ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇತ್ನಾ ಅವರನ್ನೊಳಗೊಂಡ ಪೀಠವು ನಟನ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. “ನೀವು ಅಮೆರಿಕದ ಪೌರತ್ವ ಹೊಂದಿರುವ ಒಸಿಐ (OCI) ಕಾರ್ಡ್‌ದಾರರು. ಭಾರತೀಯ ನಾಗರಿಕರಿಗೆ ಇರುವಂತೆ ರಾಜಕೀಯ ಪ್ರತಿಭಟನೆ ಮಾಡುವ ಹಕ್ಕು ನಿಮಗೆ ಇಲ್ಲ. ಭಾರತೀಯ ನಾಗರಿಕನೊಬ್ಬ ಅಮೆರಿಕದಲ್ಲಿ ಹೀಗೆ ಪ್ರತಿಭಟನೆ ನಡೆಸಿದ್ದರೆ ಅವರನ್ನು ತಕ್ಷಣ ದೇಶದಿಂದ ಗಡಿಪಾರು ಮಾಡಲಾಗುತ್ತಿತ್ತು” ಎಂದು ಹೈಕೋರ್ಟ್ ಖಾರವಾಗಿ ನೆನಪಿಸಿತು.

ಅಲ್ಲದೆ, “ದಶಕಗಳಿಂದ ಭಾರತದಲ್ಲೇ ನೆಲೆಸಿ, ಬಾಲಿವುಡ್ ನಟನಾಗಿ ಬೆಳೆದಿದ್ದರೂ ಭಾರತೀಯ ಪೌರತ್ವವನ್ನು ಏಕ ಪಡೆದಿಲ್ಲ?” ಎಂದೂ ನ್ಯಾಯಪೀಠ ಪ್ರಶ್ನಿಸಿತು.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ‘ದೇಶ ತೊರೆಯುವ ನೋಟಿಸ್’ (Leave India Notice) ಪ್ರಶ್ನಿಸಿ ಇಮ್ರಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ನೋಟಿಸ್ ಮೇಲಿನ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 7 ಕ್ಕೆ ಮುಂದೂಡಿದೆ.

Share

Leave a comment

Leave a Reply

Your email address will not be published. Required fields are marked *