SUDDIKSHANA KANNADA NEWS/ DAVANAGERE/ DATE:08-11-2024
ದಾವಣಗೆರೆ: ಜಿಲ್ಲಾಡಳಿತ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನವಂಬರ್ 9 ರಂದು ಸಂಜೆ 5.30ಕ್ಕೆ ನಗರದ ಗಾಜಿನ ಮನೆಯಲ್ಲಿ 2024 ನವಂಬರ್ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸುವರ್ಣ ಸಂಭ್ರಮವನ್ನು ಏರ್ಪಡಿಸಲಾಗಿದೆ.
ನವೆಂಬರ್ 30 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಭಾಗವಹಿಸಿ ವೀಕ್ಷಣೆ ಮಾಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ:
ನವಂಬರ್ 9 ರಂದು ನಗರದ ಚೇತನ್ ಕುಮಾರ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ, ಇಂಚನ ಮತ್ತು ದರ್ಶನ ಇವರಿಂದ ಸ್ಯಾಕ್ಸೋಪೋನ್ ವಾದನ, ಬಾಲಿ ಜಂಬೆ ಮತ್ತು ಸಂಗಡಿಗರು ಜಂಬೆ ಝಲಕ್ ಹಾಗೂ ಕಡಬಗೆರೆ ಶ್ರೀನಿವಾಸ್ರವರಿಂದ ಜಾನಪದ ಜಾದೂ, ನವಂಬರ್ 10 ರಂದು ಆನಂದಗೌಡ ಪಾಟೀಲ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ, ಸವಿತಾ ಚಿರುಕುಣಯ್ಯ ಪೂಜಾ ಕುಣಿತ, ನಮನ ಅಕಾಡೆಮಿಯವರಿಂದ ನೃತ್ಯರೂಪಕ, ನವಂಬರ್ 16 ರಂದು ಯುಗಧರ್ಮ ರಾಮಣ್ಣ ಅವರಿಂದ ಜಾನಪದ ಗೀತೆಗಳು, ಪಂಡಿತ್ ರವೀಂದ್ರ ಅವರಿಂದ ಹಿಂದೂಸ್ತಾನಿ ಸಂಗೀತ, ಪಲ್ಲವಿ ಮತ್ತು ಸಂಗಡಿಗರಿಂದ ಮಹಿಳಾ ವೀರಗಾಸೆ, ನವಂಬರ್ 17 ರಂದು ಮಹೇಶ್ ಕುಮಾರ್ ಮತ್ತು ತಂಡದವರಿಂದ ಚಂಡೆವಾದನ, ಬಸವಕಲಾ ಲೋಕ ಅವರಿಂದ ಸಂಗೀತ ಕಾರ್ಯಕ್ರಮ, ಪಂಡಿತ್ ಎಂ.ಎಸ್ ಪ್ರದೀಪ್ ಕುಮಾರ್, ಇವರಿಂದ ಸಿತಾರ ವಾದನ, ನವಂಬರ್ 23 ರಂದು ರಾಮಚಂದ್ರ ಹಡಪದ ಇವರಿಂದ ಸಂಗೀತ ಕಾರ್ಯಕ್ರಮ, ಸಂಕರ್ಷಣ ನೃತ್ಯ ಶಾಲೆಯಿಂದ ನೃತ್ಯ ರೂಪಕ, ನವಂಬರ್ 24 ರಂದು ರಮೇಶ್ನಾಥ್ ಕದ್ರಿ ಇವರಿಂದ ಸ್ಯಾಕ್ಸೊಪೋನ್ ವಾದನ, ನೂಪುರ ಕಲಾ ಸಂಸ್ಥೆಯವರಿಂದ ನೃತ್ಯ ರೂಪಕ, ನವಂಬರ್ 29 ರಂದು ಶೃತಿ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ಅದಮ್ಯ ಕಲಾ ಸಂಸ್ಥೆಯವರಿಂದ ವಾದ್ಯ ಸಂಗೀತ, ಪರಶುರಾಮ್ ಸಂಗಡಿಗರಿಂದ ಜಾನಪದ ಸಂಗೀತ, ನವಂಬರ್ 30 ರಂದು ಚಿರಂತನ ಅಕಾಡೆಮಿಯಿಂದ ನೃತ್ಯ ರೂಪಕ, ಸವಿತಾ ಗಣೇಶ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.