SUDDIKSHANA KANNADA NEWS/ DAVANAGERE/ DATE:03-05-2023
ದಾವಣಗೆರೆ (DAVANAGERE): ಕಾಂಗ್ರೆಸ್ (CONGRESS) ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ (BAN) ಪ್ರಸ್ತಾಪ ಮಾಡಿರುವುದು ಖಂಡನೀಯ ಎಂದು ಬಜರಂಗದಳ ಜಿಲ್ಲಾ ಘಟಕ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ಸಿ. ಎಸ್. ರಾಜು, ಹಿಂದೂಗಳ ಆರಾಧ್ಯ ಮೂರ್ತಿಯಾಗಿರುವ ಗೋಮಾತೆಯನ್ನು ಇಡೀ ದೇಶದಲ್ಲಿ ರಕ್ಷಣೆ ಮಾಡಿದ್ದು ಬಜರಂಗದಳ. ರಕ್ಷಣೆ ಮಾಡಿದ ಲಕ್ಷಾಂತರ
ಗೋವುಗಳ ಶಾಪವೇ ಕಾಂಗ್ರೆಸ್ ಗೆ ತಟ್ಟಲಿದೆ. ಬಜರಂಗದಳದ ವಿಚಾರಕ್ಕೆ ಬಂದರೆ ರಾಜ್ಯದ ಮಾತೆಯವರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಜಿಹಾದಿಗಳ ಕ್ರೌರ್ಯಕ್ಕೆ ಉತ್ತರ ಕೊಟ್ಟು ಹಿಂದೂಗಳ ರಕ್ಷಣೆ, ಆತ್ಮಸ್ಥೈರ್ಯ ತುಂಬಿದ ಸಂಘಟನೆ. ಈ ಪ್ರಣಾಳಿಕೆ ಮೂಲಕ ಬೆಂಕಿಗೆ ಕೈ ಹಾಕುವ ಕೆಲಸ ಮಾಡಿದ, ದುಸ್ಸಾಹಸ ಯೋಜನೆ ಮಾಡಿದ ಕಾಂಗ್ರೆಸ್ ರಾಜ್ಯದಲ್ಲಿ ನಾಶ ಆಗಲಿದೆ. ಜೇನುಗೂಡಿಗೆ
ಕೈ ಹಾಕಿ ಮಹಿಳೆಯರೇ ಮನೆಗೆ ಮತ ಕೇಳಲು ಬಂದಾಗ ಪೊರಕೆ ಹಿಡಿದು ಕಾಂಗ್ರೆಸ್ ನಾಯಕರನ್ನು ವಾಪಸ್ ಕಳುಹಿಸುವ ಸಂದರ್ಭ ಬರಲಿದೆ ಎಂದರು.
ಒಂದು ಧರ್ಮದ ತುಷ್ಟೀಕರಣ ಮಾಡುವುದನ್ನು ಬಿಡಬೇಕು. ಜಿಹಾದಿ ಸಂಘಟನೆಯಾದ ಪಿಎಫ್ಐ ಅನ್ನು ಬಿಜೆಪಿ ನಿಷೇಧ ಮಾಡಿದೆ. ಇದನ್ನು ಸ್ವಾಗತಿಸಬೇಕಾದ ಕಾಂಗ್ರೆಸ್ ಏನನ್ನೂ ಹೇಳಲಿಲ್ಲ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನು
ಜಾರಿಗೆ ತಂದಿರುವ ಬಿಜೆಪಿ ಸರ್ಕಾರವು ಜನರ ಹಿತ ಕಾಪಾಡುತ್ತಿದೆ. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ವಿಹೆಚ್ ಪಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಬಜರಂಗದಳ ನಗರ ಕಾರ್ಯದರ್ಶಿ ಪ್ರಸನ್ನಕುಮಾರ್, ಕಲ್ಯಾಣಮ್ಮ, ಶಕುಂತಲಮ್ಮ ಮತ್ತಿತರರು ಹಾಜರಿದ್ದರು.