SUDDIKSHANA KANNADA NEWS/ DAVANAGERE/ DATE:06-11-2023
ದಾವಣಗೆರೆ: ಮದುವೆ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ 32 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಮಸಾಲೆ ವ್ಯಾಪಾರ ಮಾಡುತ್ತಿದ್ದ 26 ವರ್ಷದ ಆರ್. ಕಿರಣ್ ನಾಯ್ಕ್ ಬಂಧಿತ ಆರೋಪಿ.

ಘಟನೆ ಹಿನ್ನೆಲೆ ಏನು…?
ಕಳೆದ ಆಗಸ್ಟ್ 20ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರಿನ ಕಾಡೇನಹಳ್ಳಿಯ ವಾಸಿ ಎಂಜಿನಿಯರ್ 24 ವರ್ಷದ ಶಿರೀಷ ಎಂಬುವವರು ಸ್ನೇಹಿತೆ ಹರ್ಷಿತಾ ಮದುವೆಗೆ ದಾವಣಗೆರೆಗೆ ಬಂದಿದ್ದರು. ನಗರದ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮದುವೆ ಇತ್ತು. ಮದುವೆಗೆ ಬಂದವರು ವಾಸ್ತವ್ಯ ಮಾಡಲು ರೂಂ ನಂಬರ್ 101ರಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ರೂಮ್ ನಲ್ಲಿ ಬ್ಯಾಗ್ ಇಟ್ಟು ಮದುವೆ ಕಾರ್ಯಕ್ರಮದಲ್ಲಿರುವಾಗ ಯಾರೋ ಕಳ್ಳರು ಬ್ಯಾಗಿನಲ್ಲಿದ್ದ ನನ್ನ ಅಂದಾಜು 1,30,000 ರೂ ಮೌಲ್ಯದ 25 ಗ್ರಾಂ ತೂಕದ ಡಾಲರ್ ಇರುವ ಬಂಗಾರದ ಚೈನ್, ಶಿರೀಷ ಸ್ನೇಹಿತೆ ಅಂಕಿತ ಅವರ ಅಂದಾಜು 18 ಸಾವಿರ ರೂಪಾಯಿ ಮೌಲ್ಯದ 3 ಗ್ರಾಂ ಬಂಗಾರದ ಓಲೆ, ಸ್ವಾತಿ ಅವರ ಅಂದಾಜು 18 ಸಾವಿರ ರೂಪಾಯಿ ಮೌಲ್ಯದ 3 ಗ್ರಾಂ ಬಂಗಾರದ ಓಲೆಯನ್ನು ಕದ್ದೊಯ್ದಿದ್ದಾರೆ. ಕಳವು ಮಾಡಿದ ಆರೋಪಿ ಪತ್ತೆ ಹಚ್ಚಿ ಬಂಗಾರದ ಒಡವೆ ವಾಪಸ್ ಕೊಡಿಸುವಂತೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಆರೋಪಿಗಳ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಹಾಗೂ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ. ಶೇತಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿಸ ರಚಿಸಲಾಗಿತ್ತು. ಸಿಸಿಟಿವಿ ಸೇರಿದಂತೆ ಇತರೆ ಮಾಹಿತಿ ಕಲೆ ಹಾಕಿದ ಪೊಲೀಸರು ಮಸಾಲೆ ವ್ಯಾಪಾರ ಮಾಡುತ್ತಿದ್ದ ಕಿರಣ್ ನಾಯ್ಕ್ ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಸತ್ಯ ಹೊರ ಬಿದ್ದಿದೆ. ವಿದ್ಯಾನಗರ ಪೊಲೀಸ್ ಠಾಣೆಯ 1 ಪ್ರಕರಣ ಮತ್ತು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ 1 ಪ್ರಕರಣ ಪತ್ತೆಯಾಗಿದೆ.
ಈ ಆರೋಪಿತನ ಮೇಲೆ ದಾವಣಗೆರೆ ನಗರದ ವಿದ್ಯಾನಗರ, ಗಾಂಧಿನಗರ, ಬಸವನಗರ ಹಾಗೂ ಬಡಾವಣೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಅಲ್ಲದೇ ಪೊಲೀಸರು ಹಲವು ಬಾರಿ ಈ ಆರೋಪಿಯನ್ನು ಬಂಧಿಸಿದ್ದರು,
ವಾರೆಂಟ್ ಸಹ ಜಾರಿಯಾಗಿತ್ತು. ಆರೋಪಿ ಪತ್ತೆ ಮಾಡಿದ ತನಿಖಾಧಿಕಾರಿ ಪ್ರಭಾವತಿ.ಸಿ.ಶೇತಸನದಿ, ಪಿಎಸ್ ಐ ಎಂ. ವಿಜಯ್, ಎಂ. ಜಿ. ರೇಣುಕಾ, ಸಿಬ್ಬಂದಿ ಸಿಬ್ಬಂದಿ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆರ್. ಹಾಗೂ ಠಾಣಾ ಸಿಬ್ಬಂದಿ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.