SUDDIKSHANA KANNADA NEWS/ DAVANAGERE/ DATE:18-10-2023
ದಾವಣಗೆರೆ: ಬಿಜೆಪಿಯ ಹಲವು ನಾಯಕರು ಪಕ್ಷ ಬಿಡುತ್ತಾರೆ. ನನಗೆ ಫೋನ್ ಕರೆ ಮಾಡಿ ಈ ಕುರಿತು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಕೊರತೆಯೇ ಇದಕ್ಕೆ ಕಾರಣ. ನಾನು ಕೂಡ ಬಿಜೆಪಿಯವರಿಗೆ ಬೇಡ ಎನಿಸುತ್ತಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಹೇಳಿದ್ದಾರೆ.
Read Also This Story:

Pramod Muthalik: ಭಯೋತ್ಪಾದಕನ ರೀತಿ ನನ್ನನ್ನು ಬಂಧಿಸಿದ್ರು, ರಾಗಿಗುಡ್ಡಕ್ಕೆ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತೇನೆ ಎಂದಿದ್ಯಾಕೆ ಪ್ರಮೋದ್ ಮುತಾಲಿಕ್..?
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ. ಹೊನ್ನಾಳಿ – ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿದ್ದೇನೆ, ಅನುದಾನ ಬಾಕಿ ಇತ್ತು. ಮರು ಚಾಲನೆ ನೀಡುವಂತೆ
ಕಾಂಗ್ರೆಸ್ ಸರ್ಕಾರದ ಸಚಿವರು, ನಾಯಕರನ್ನು ಭೇಟಿ ಮಾಡಿದ್ದೇನೆ ಎಂದರು.
ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಯೋಜನೆಗಳ ಕರ ಪತ್ರ ಹಂಚಿದ್ದೇವೆ, ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ, ಪಕ್ಷದ ನಾಯಕರ ಮೇಲೆ ನೋವಾಗಿದೆ, ಆರು ಸಚಿವ ಸ್ಥಾನ ಖಾಲಿ ಇದ್ದರೂ ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ ನೀಡಲಿಲ್ಲ. ಈಗ ನೋಡಿ ಕಾಂಗ್ರೆಸ್ ನವರು ಏಕಕಾಲದಲ್ಲಿ ಎಲ್ಲಾ ಮಂತ್ರಿ ಸ್ಥಾನ ತುಂಬಿದರು. ರಾಜೂ ಗೌಡ ಮತ್ತು ನನಗೂ ಅನ್ಯಾಯ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎಸ್ ಎ ರವೀಂದ್ರನಾಥ್ ರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೂ ಕೊಡಲಿಲ್ಲ. ಐವರು ಶಾಸಕರು ಇದ್ದರೂ ಸಚಿವ ಸ್ಥಾನ ಸಿಗಲೇ ಇಲ್ಲ. ಈ ರೀತಿ ನಡೆದುಕೊಂಡಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಬೇಕಾಯಿತು ಎಂದು ವಿಶ್ಲೇಷಿಸಿದರು.