SUDDIKSHANA KANNADA NEWS/ DAVANAGERE/ DATE:18-10-2023
ದಾವಣಗೆರೆ: ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಲು ಪೊಲೀಸರು ಅನುಮತಿ ನೀಡಲಿಲ್ಲ. ತೀರ್ಥಹಳ್ಳಿ ತಾಲೂಕಿನ ಮಾಸ್ತಿಕಟ್ಟೆ ಬಳಿ ಇಂದು ಬೆಳಿಗ್ಗೆ ಸುಮಾರು 50 ಪೊಲೀಸರು ಹಾಗೂ ಜೀಪು ತಂದು ಬಂಧನ ಮಾಡಿದರು. ಭಯೋತ್ಪಾದಕರನ್ನು ಬಂಧಿಸುವ ರೀತಿ ನನ್ನನ್ನು ಬಂಧಿಸಿ ದಾವಣಗೆರೆಗೆ ಬಿಟ್ಟು ಹೋಗಿದ್ದು ಖಂಡನೀಯ. ಶಿವಮೊಗ್ಗದ ರಾಗಿಗುಡ್ಡಕ್ಕೆ 15 ದಿನಗಳ ಕಾಲ ನಿರ್ಬಂಧ ಹೇರಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಪ್ರಶ್ನಿಸುತ್ತೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ತಿಳಿಸಿದರು.
READ ALSO THIS STORY:
Bhadra Dam: ಭದ್ರಾಡ್ಯಾಂ ನೀರು ನಿಲುಗಡೆಗೆ ಆಕ್ರೋಶ:,ರೈತರ ಹಿಸಾಸಕ್ತಿ ಮರೆತ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು: ಭಾರತೀಯ ರೈತ ಒಕ್ಕೂಟ ಆರೋಪ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದಕರಿಗೆ ತಂದೆ ನೋಡಲು, ಮದುವೆಗೆ ಹಾಜರಾಗಲು ಜಾಮೀನಿನ ಮೇಲೆ ಅವಕಾಶ
ಕೊಡಲಾಗುತ್ತದೆ. ನಾನು ರಾಗಿಗುಡ್ಡಕ್ಕೆ ತೆರಳಿ ಹಿಂದೂಗಳ ಮೇಲೆ ಆಗಿರುವ ಹಲ್ಲೆ ಖಂಡಿಸಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೆ. ನಾನೇನೂ ಬಾಂಬ್ ಹಾಕುತ್ತಿರಲಿಲ್ಲ. ಮಾರಕಾಸ್ತ್ರ ಹೊಂದಿರಲಿಲ್ಲ. ಮಂಗಳೂರಿನಿಂದ ಬಸ್ ಮೂಲಕ
ಶಿವಮೊಗ್ಗಕ್ಕೆ ಆಗಮಿಸುವ ಮಾರ್ಗ ಮಧ್ಯೆ ಬಂಧನ ಮಾಡಿದ್ದು ಖಂಡನೀಯ ಎಂದು ಹೇಳಿದರು.
ನನ್ನ ಬಂಧನ ಹಿಂದೂ ವಿರೋಧಿ ಕ್ರಮ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದಾಗಿನಿಂದಲೂ ಹಿಂದೂ ವಿರೋಧಿ ಕ್ರಮ ಅನುಸರಿಸುತ್ತಿದೆ. ಏಳು ಜಿಲ್ಲೆಗಳ ಪಿಎಫ್ ಐ ಕಾರ್ಯಕರ್ತರ ಕೇಸ್ ಹಿಂಪಡೆಯಲು ಸರ್ಕಾರ
ಕ್ರಮ ತೆಗೆದುಕೊಳ್ಳಲು ಚರ್ಚೆ ನಡೆಸುತ್ತಿದೆ. ಇದೊಂದು ದೇಶ ದ್ರೋಹ ಹಾಗೂ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಡುವ ಕೆಲಸ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಬಾರದು ಎಂದು ಒತ್ತಾಯಿಸಿದರು.
ಭಯೋತ್ಪಾದಕರು ಎಲ್ಲಿ ಬೇಕಾದರೂ ಓಡಾಡಬಹುದು. ಆದ್ರೆ, ಹಿಂದೂ ಮುಖಂಡರು ಭೇಟಿ ನೀಡಲು ಮಾತ್ರ ಅವಕಾಶ ಕೊಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹದಿನೈದು ದಿನ ನಾನು ಶಿವಮೊಗ್ಗದ ರಾಗಿಗುಡ್ಡಕ್ಕೆ ಹೋಗದಂತೆ
ನಿರ್ಬಂಧ ಹೇರಲಾಗಿದೆ. ಔರಂಗಜೇಬು ರಾಗಿಗುಡ್ಡದಲ್ಲಿ ಹೊರಗೆ ಬಂದಿದ್ದೇನೆ. 37 ಬಾರಿ ಶರೀರದ ಅಂಗ ಕತ್ತರಿಸಿ ಶಿವಾಜಿ ಮಗನ ಕೊಂದ ಔರಂಗಜೇಬು ಕಟೌಟ್ ಹೊರಬಂದಿದೆ. ತಂದೆ ಕೊಂದವನು, 5 ಸಾವಿರಕ್ಕೂ ಹೆಚ್ಚು ದೇವಸ್ಥಾನ ಧ್ವಂಸ ಮಾಡಿದವನು ಮುಸ್ಲಿಂರಿಗೆ ಹೀರೋ ಆಗಿದ್ದಾನೆ. ಔರಂಗಜೇಬು ಆದರ್ಶ ಬೆಳೆಸಿಕೊಳ್ಳುವಂಥ ಮಾನಸಿಕತೆ ಬೆಳೆಯುತ್ತಿರುವುದು ವಿಪರ್ಯಾಸದ ಸಂಗತಿ. ಕಟೌಟ್ ಹಾಕಿದವರ ಮೇಲೆ ಕ್ರಮ ಇಲ್ಲ. ಸಾಂತ್ವನ ಹೇಳಲು ಹೊರಟವರ
ಮೇಲೆ ಕ್ರಮ ಯಾಕೆ ಎಂದು ಪ್ರಶ್ನಿಸಿದರು.
ಔರಂಗಜೇಬು ಘೋರಿಯಿಂದ ಹೊರಬಂದು ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ಮಾನಸಿಕತೆ ಗಟ್ಟಿ ಮಾಡ್ತಿದ್ದಾನೆ. ಬಾಬರ್, ಲಾಡೆನ್ ನಂಥವರು ಸಮಾಜ ನುಂಗಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿರವುದು ಖಂಡನೀಯ. ರಾಗುಗುಡ್ಡದಲ್ಲಿ ಎಸ್ಪಿ ಮೇಲೆ ದಾಳಿ ಮಾಡಲಾಗಿದೆ. ಹಾಗಾದರೆ ಎಲ್ಲಿದೆ ಸುರಕ್ಷತೆ ಇದೆ ಎಂದು ಹೇಳಿದ ಅವರು, ನಾನು ಹೈಕೋರ್ಟ್ ಮೂಲಕ ಸ್ಟೇ ತಂದು ರಾಗಿಗುಡ್ಡಕ್ಕೆ ಹೋಗುತ್ತೇನೆ. ನಾನು ಕೋಮುದ್ರೇಕ, ಗಲಾಟೆ, ದೊಂಬಿ ಮಾಡುವಂಥನಲ್ಲ ಎಂದು ತಿಳಿಸಿದರು.
ನಾನು ಸಾವು ಗೆದ್ದಿದ್ದೇನೆ. ದುಷ್ಟ ಶಕ್ತಿಗಳಿಗೆ ಹೆದರಲ್ಲ. ನಾನು ನನ್ನ ಹೋರಾಟ ಮುಂದುವರಿಸ್ತೇನೆ. ಬಸ್ ನಲ್ಲಿ ಬರುತ್ತಿದ್ದೆ. ನಾನು ಯಾವುದಕ್ಕೂ ಅಂಜುವುದಿಲ್ಲ. ಸಾವು ಯಾವಾಗ ಹೇಗೆ ಬೇಕಾದರೂ ಬರಬಹುದು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ್ದೆ. ನಾನು ಮೋದಿ ವಿರುದ್ಧ ಇಲ್ಲ. ಹಿಂದುತ್ವ ಉಳಿಯಬೇಕಾದರೆ ಮೋದಿ ಅವರಂಥವರು ಕೇಂದ್ರದಲ್ಲಿ ಅಧಿಕಾರದಲ್ಲಿರಬೇಕು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹೀಗೆ ಮಾಡಲಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆಯಾದ ನಾಲ್ಕು ದಿನಗಳ ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದಾಗಲೂ ತಡೆದಿದ್ದರು. ಈಗ ಮತ್ತೆ ಮರುಕಳಿಸಿದೆ. ಹಾಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳೂ ಒಂದೇ ಎಂದು ಕಿಡಿಕಾರಿದರು.
ನನಗೆ ಗೋವಾಕ್ಕೆ ಹೋಗಲು ಅನುಮತಿ ಇಲ್ಲ. ಕಳೆದ ಎಂಟು ವರ್ಷಗಳಿಂದಲೂ ನಿರ್ಬಂಧ ಹೇರಲಾಗಿದೆ. ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ದೇಶಕ್ಕೆ ಮೋದಿ ಬೇಕು. ಅನಿವಾರ್ಯ, ಅವಶ್ಯಕತೆ ಕೂಡ ಇದೆ ಎಂದು ಪ್ರತಿಪಾದಿಸಿದರು.
ಗೋಷ್ಠಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಪರಶುರಾಮ್, ರಾಹುಲ್ ಬಿ. ಜಿ., ಅನಿಲ್, ಶ್ರೀಧರ್, ಸಾಗರ್, ಮಧುಸೂದನ್, ವಿನಯ್ ಮತ್ತಿತರರು ಹಾಜರಿದ್ದರು.