SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ನಗರದ ರೇಣುಕಾ ಮಂದಿರದ ಬಳಿ ಕೇಸರಿ ಬಾವುಟ ಕಟ್ಟುವ ವೇಳೆ ಕ್ರೇನ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಯುವಕನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಆತನನ್ನೇ ನಂಬಿಕೊಂಡಿದ್ದ ಕುಟುಂಬ ಈಗ ದಿಗ್ಬ್ರಾಂತರಾಗಿದ್ದು, ಜಿಲ್ಲಾಡಳಿತ ಹಾಗೂ ಹಿಂದೂ ಮಹಾಗಣಪತಿ ಸಮಿತಿಯವರು ಪರಿಹಾರ ಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
Read Also This Story:
Davanagere: ದಾವಣಗೆರೆಯಲ್ಲಿ ಅ.16 ರಂದು ಬೃಹತ್ ಉದ್ಯೋಗ ಮೇಳ, 150 ಕ್ಕಿಂತ ಹೆಚ್ಚು ಕಂಪನಿಗಳು ಭಾಗಿ, ಸಾವಿರ ಉದ್ಯೋಗ ನಿರೀಕ್ಷೆ: ಡಿಸಿ
ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಪೋಸ್ಟ್ ಹಾಕಿರುವ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡವೆ ಕ್ವಾರಿ ಕಾರ್ಮಿಕರ ಸಂಘವು ಭಾವಪೂರ್ಣ ಶ್ರದ್ಧಾಂಜಲಿಯನ್ನು ಪೃಥ್ವಿರಾಜ್ ನಿಧನಕ್ಕೆ ಸಲ್ಲಿಸಿದೆ. ರೇಣುಕಾ ಮಂದಿರದ ಬಳಿ ಕೇಸರಿ ಧ್ವಜ ಹಾಗೂ ಬಾವುಟ ಕಟ್ಟುವ ವೇಳೆಯಲ್ಲಿ ಕ್ರೇನ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಪೃಥ್ವಿರಾಜ್ ಮೃತಪಟ್ಟಿದ್ದರು. ಸ್ನೇಹಿತರು, ಕುಟುಂಬಸ್ಥರು, ಸಂಬಂಧಿಕರು ಕಂಬಿನಿ ಮಿಡಿದಿದ್ದರು. ಸ್ಥಳಕ್ಕೆ ಹಿಂದೂ ಮಹಾಗಣಪತಿ ಟ್ರಸ್ಟ್ ನ ಜೊಳ್ಳಿ ಗುರು ಅವರು ಆಗಮಿಸಿದ್ದರು. ಈ ವೇಳೆ ಪೃಥ್ವಿರಾಜ್ ಸ್ನೇಹಿತರು ಆತನ ಕಷ್ಟದ ಬಗ್ಗೆ ಮಾಹಿತಿ ನೀಡಿದ್ದರು. ಕುಟುಂಬಕ್ಕೆ ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡಿದ್ದರು.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಪೃಥ್ವಿರಾಜ್ ಸಾವಿಗೆ ಕಂಬನಿ ಮಿಡಿಯುತ್ತಿದ್ದು, ಹೇ ಗಣಪ ಈ ಸಾವು ನ್ಯಾಯವೇ ಎಂದು ಸಂದೇಶ ಹಾಕಲಾಗುತ್ತಿದೆ.
ಕಾವೇರಿ ಮಾತಾ ಫ್ಲಂಬರ್ ಸಂಘದ ಅಧ್ಯಕ್ಷ ವೀರಣ್ಣನವರ ಮಗ ಪೃಥ್ವಿರಾಜ್ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಸಿಂಗಾರ ಗೊಳಿಸಲು ಪೃಥ್ವಿರಾಜ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ. ಈ ಘಟನೆಯಲ್ಲಿ ಸಾವಿಗೀಡಾದ ಪೃಥ್ವಿರಾಜ್ ರವರ ಅವಲಂಬಿತ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಹಿಂದೂ ಮಹಾ ಗಣಪತಿ ಸಮಿತಿಯವರು 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಎಐಟಿಯುಸಿ ಒತ್ತಾಯಿಸಿದೆ.
ಅ. 14ಕ್ಕೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಟ್ರಸ್ಟ್ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಕೇಸರಿ ಬಾವುಟ ಕಟ್ಟಲಾಗುತಿತ್ತು. ಕ್ರೇನ್ ಮೂಲಕ ಅಳವಡಿಸಲಾಗುತಿತ್ತು. ಸಂಜೆ ವೇಳೆ ಕ್ರೇನ್ ನ ಹಿಂದೆ ನಿಂತಿದ್ದರು. ಆಗ ಚಾಲಕನಿಗೆ ಇದು ಗೊತ್ತಿರಲಿಲ್ಲ. ಹಿಮ್ಮುಖವಾಗಿ ಕ್ರೇನ್ ಚಲಿಸಿದ ಪರಿಣಾಮ ಕ್ರೇನ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ತೆಗೆದುಕೊಂಡು ಹೋಗಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರ ಆಕ್ರಂದನ ಹೇಳತೀರದ್ದಾಗಿತ್ತು.