Home ದಾವಣಗೆರೆ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ: ಪಿಎಂ ಯಶಸ್ವಿ ಸ್ಕಾಲರ್‌ಶಿಪ್ 2026ರಡಿ ಒಬಿಸಿ, ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ವಾರ್ಷಿಕ 1.25 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ!
ದಾವಣಗೆರೆಬೆಂಗಳೂರುವಾಣಿಜ್ಯ

9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ: ಪಿಎಂ ಯಶಸ್ವಿ ಸ್ಕಾಲರ್‌ಶಿಪ್ 2026ರಡಿ ಒಬಿಸಿ, ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ವಾರ್ಷಿಕ 1.25 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ!

Share
ಪಿಎಂ ಯಶಸ್ವಿ ಸ್ಕಾಲರ್‌ಶಿಪ್
Share

ನವದೆಹಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಧಾನಮಂತ್ರಿ ಯಂಗ್ ಅಚೀವರ್ಸ್ ಸ್ಕಾಲರ್‌ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ (PM-YASASVI) ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ‘ಪಿಎಂ ಯಶಸ್ವಿ ಸ್ಕಾಲರ್‌ಶಿಪ್ 2026’ (PM YASASVI Scholarship 2026) ಯೋಜನೆಯನ್ನು ಜಾರಿಗೆ ತಂದಿದೆ.

ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಶಾಲಾ ಹಂತದಿಂದ ಕಾಲೇಜು ಹಂತದವರೆಗೆ ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.

ಪ್ರಮುಖವಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ರೂ. ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,25,000 ರೂ.ವರೆಗೆ ವಿದ್ಯಾರ್ಥಿವೇತನ ಸಿಗಲಿದೆ.

ಈ ಯೋಜನೆಯು ಪ್ರಿ-ಮ್ಯಾಟ್ರಿಕ್ ಮತ್ತು ಪೋಸ್ಟ್-ಮ್ಯಾಟ್ರಿಕ್ ಸ್ಕಾಲರ್‌ಶಿಪ್‌ಗಳು, ಉನ್ನತ ಶಾಲಾ ಶಿಕ್ಷಣ, ಉನ್ನತ ಕಾಲೇಜು ಶಿಕ್ಷಣ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಸೇರಿದಂತೆ ಐದು ಪ್ರಮುಖ ಘಟಕಗಳನ್ನು ಹೊಂದಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತಾ ಮಾನದಂಡಗಳು: ವಿದ್ಯಾರ್ಥಿಗಳು 8 ಅಥವಾ 10ನೇ ತರಗತಿಯಲ್ಲಿ ಕನಿಷ್ಠ ಶೇ. 60 ಅಂಕಗಳನ್ನು ಪಡೆದಿರಬೇಕು. ಪೋಷಕರ ವಾರ್ಷಿಕ ಆದಾಯವು 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು.

ವರ್ಗದ ಮೀಸಲಾತಿ: ಕೇವಲ ಒಬಿಸಿ (OBC), ಇಡಬ್ಲ್ಯೂಎಸ್ (EWS) ಮತ್ತು ಡಿಎನ್‌ಟಿ (DNT) ವರ್ಗಕ್ಕೆ ಸೇರಿದ 9, 10, 11 ಹಾಗೂ 12ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್‌ಶಿಪ್‌ಗೆ ಅರ್ಹರಾಗಿರುತ್ತಾರೆ.

ಅಗತ್ಯವಿರುವ ದಾಖಲೆಗಳು:

ಆದಾಯ ಪ್ರಮಾಣಪತ್ರ (Income Certificate),

ಜಾತಿ ಪ್ರಮಾಣಪತ್ರ (Category Certificate),

ಆಧಾರ್ ಕಾರ್ಡ್ (Aadhar Card),

ಅಂಕಪಟ್ಟಿ (Marksheet) ಹಾಗೂ

ಬ್ಯಾಂಕ್ ಖಾತೆ ವಿವರಗಳನ್ನು ವಿದ್ಯಾರ್ಥಿಗಳು ಸಿದ್ಧವಾಗಿಟ್ಟುಕೊಳ್ಳಬೇಕು.

Share

Recent Posts

Recent Comments

No comments to show.
Related Articles