SUDDIKSHANA KANNADA NEWS/ DAVANAGERE/ DATE-27-06-2025
ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಅಪಘಾತ ವಲಯಗಳನ್ನು ಗುರುತಿಸಿ, ಈ ಸ್ಥಳಗಳಲ್ಲಿ ಸೈನ್ ಬೋರ್ಡ್ಸ್, ಸಿಗ್ನಲ್ ಲೈಟ್ ಅಳವಡಿಕೆ ಹಾಗೂ ಇತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
Read Also This Story: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರೇಣುಕಾಚಾರ್ಯ ಕೋಟ್ಯಂತರ ರೂ. ಪಡೆದಿದ್ದಕ್ಕೆ ದಾಖಲೆ ಇದೆ: ಶಿವಗಂಗಾಬಸವರಾಜ್ ಸ್ಫೋಟಕ ಆರೋಪ!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ. ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ನಿರೀಕ್ಷಕ ರವೀಶ್ ಹಾಗೂ ಪಿಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡವು ಈ ಕಾರ್ಯ ನಡೆಸಿತು.
ಮಾವಿನಕಟ್ಟೆ ಅಪಘಾತ ವಲಯದಲ್ಲಿ ಬ್ಲಿಂಕರ್ ಲೈಟ್ ಹಾಗೂ ಕ್ಯಾಟ್ ಐಸ್ ಅಘಾತ ವಲಯ ಬೋರ್ಡ್ ಅಳವಡಿಸಲಾಗಿದೆ. ಹೆಬ್ಬಾಳಗೆರೆ ಅಪಘಾತ ವಲಯದಲ್ಲಿ ಅಪಘಾತ ವಲಯ ಬೋರ್ಡ್ ಅಳವಡಿಸಿದೆ. ನುಗ್ಗೇಹಳ್ಳಿ ಅಪಘಾತ ವಲಯದಲ್ಲಿಯೂ ಬ್ಲಿಂಕರ್ ಲೈಟ್ ಹಾಗೂ ಕ್ಯಾಟ್ ಐಸ್ ಅಪಘಾತ ವಲಯ ಬೋರ್ಡ್ ಹಾಕಲಾಯಿತು.
Read Also This story: “ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ”: Channagiri ಶಾಸಕರ ಪಂಥಾಹ್ವಾನ ಸ್ವೀಕರಿಸಿದ ಎಂ. ಪಿ. ರೇಣುಕಾಚಾರ್ಯ!
ಗರಗ ಕ್ರಾಸ್ ಸ್ಥಳದಲ್ಲಿ ಬ್ಲಿಂಕರ್ ಲೈಟ್ ಹಾಗೂ ಕ್ಯಾಟ್ ಐಸ್ ಅಳವಡಿಸಿದೆ. ವಾಹನ ಸವಾರರು ನಿಧಾನವಾಗಿ ವಾಹನ ಚಾಲನೆ ಮಾಡಬೇಕು. ಅದರಲ್ಲೂ ಅಪಘಾತ ವಲಯಗಳಲ್ಲಿ ಹೆಚ್ಚಿನ ವಾಹನ ಚಾಲನೆ ಕಡೆ ಗಮನ ಹರಿಸಬೇಕು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈ ಮೂಲಕ ವಾಹನ ಸವಾರರಿಗೆ ತಿಳಿಸಲಾಯಿತು.