SUDDIKSHANA KANNADA NEWS/ DAVANAGERE/ DATE-26-06-2025
ಬೆಂಗಳೂರು: ಚನ್ನಗಿರಿ (Channagiri) ಶಾಸಕ ಶಿವಗಂಗಾ ವಿ. ಬಸವರಾಜ್ ಅವರ ಪಂಥಾಹ್ವಾನ ಸ್ವೀಕರಿಸಿರುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು, ಯಾವ ದೇವಸ್ಥಾನದಲ್ಲಿ ಕರೆದರೂ ಆಣೆ ಪ್ರಮಾಣಕ್ಕೆ ಹೋಗುತ್ತೇನೆ. ಅಲ್ಲಿಯೇ ಕುಳಿತು ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮದೇ ಸ್ಟೈಲ್ ನಲ್ಲಿ ಶಾಸಕ ಬಸವರಾಜ್ ಶಿವಗಂಗಾ ಬಸವರಾಜ್ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ.
Read Also This Story: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರೇಣುಕಾಚಾರ್ಯ ಕೋಟ್ಯಂತರ ರೂ. ಪಡೆದಿದ್ದಕ್ಕೆ ದಾಖಲೆ ಇದೆ: ಶಿವಗಂಗಾಬಸವರಾಜ್ ಸ್ಫೋಟಕ ಆರೋಪ!
ನಾನು ಶಿವಗಂಗಾ ಬಸವರಾಜ್ ಮಾತುಗಳನ್ನು ಗಮನಿಸಿದ್ದೇನೆ. ಎಲುಬಿಲ್ಲದ ನಾಲಗೆ. ಏನನ್ನೋ ಮಾತನಾಡುತ್ತದೆ. ನನ್ನ ವೈಯಕ್ತಿಕ ವಿಚಾರ ಕುರಿತಂತೆ ಮಾತನಾಡಿದ್ದಾನೆ. ನನಗೂ ಮಾತಾಡೋಕೆ ಬರುತ್ತದೆ, ಅದ್ರೆ ನಮ್ಮ ತಂದೆ ತಾಯಿ ನನಗೆ ಸಂಸ್ಕಾರ ಕಲಿಸಿದ್ದಾರೆ. ನಾಳೆ ದಾವಣಗೆರೆಯಲ್ಲಿ ಬೈಕ್ ರ್ಯಾಲಿ ಇದೆ. ನಾಡಿದ್ದು ಶನಿವಾರ ದಾವಣಗೆರೆ ಬಂದ್ ಇದೆ. ನಿರುದ್ಯೋಗಿಗಳು ಹೋರಾಟ ಮಾಡ್ತಿದಾರೆ ಅಂತಾ ಹೇಳಿದ್ದಾರೆ. ಇಂಥ ಶಾಸಕನಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಶಿವಗಂಗಾ ಬಸವರಾಜ್ ಮರಳು ದಂಧೆ ಮಾಡುತ್ತಿದ್ದರು ಎಂದು ಹೇಳಿದ್ದು ನಿಜ. ಆದರೆ, ರೈತರ ಹೋರಾವನ್ನು ಶಿವಗಂಗಾ ಬಸವರಾಜ್ ಅವಮಾನ ಮಾಡಿದ್ದಾರೆ. ನಿಮ್ಮ ಸವಾಲು ಸ್ವೀಕರಿಸಿದ್ದೇನೆ. ನನಗೆ ಎಷ್ಟು ಕೋಟಿ? ಯಾರ್ ಕೊಟ್ಟಿದ್ದಾರೆ? ನೀನು ಹೇಳಿದ ದೇವಸ್ಥಾನಕ್ಕೆ ಬರುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೀನು ಎಷ್ಟು ತಗೊಂಡೆ? ನಾನು ದಾಖಲೆ ಸಮೇತ ಬರುತ್ತೇನೆ ಬಾ ಎಂದು ತಿರುಗೇಟು ನೀಡಿದ್ದಾರೆ.