Home ದಾವಣಗೆರೆ ಪೆಟ್ರೋಲ್‌ನಲ್ಲಿ E20 ಮಿತಿ ಮೀರಿ 31.2% ಎಥನಾಲ್ ಪತ್ತೆ: ಸಾರ್ವಜನಿಕರಿಗೆ ಪರಿಹಾರ ನಿಧಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಆಗ್ರಹ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಪೆಟ್ರೋಲ್‌ನಲ್ಲಿ E20 ಮಿತಿ ಮೀರಿ 31.2% ಎಥನಾಲ್ ಪತ್ತೆ: ಸಾರ್ವಜನಿಕರಿಗೆ ಪರಿಹಾರ ನಿಧಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಆಗ್ರಹ

Share
ಎಥನಾಲ್
Share

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಶೇಕಡಾ 20 ಕ್ಕಿಂತ (E20) ಅಧಿಕ ಪ್ರಮಾಣದಲ್ಲಿ ಎಥನಾಲ್ ಬೆರೆಸಿರುವುದು ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಗಂಭೀರ ಆರೋಪ ಮಾಡಿದೆ. ಈ ನಿಯಮ ಉಲ್ಲಂಘನೆಯಿಂದ ವಾಹನ ಸವಾರರು ಎಂಜಿನ್ ಹಾನಿ ಮತ್ತು ಮೈಲೇಜ್ ಕೊರತೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರ್ಕಾರ ವಾಹನ ಚಾಲಕರಿಗೆ ಪರಿಹಾರ ನಿಧಿ ಸ್ಥಾಪಿಸಬೇಕೆಂದು ಆಗ್ರಹಿಸಿದೆ.

ರಾಜ್ಯಾದ್ಯಂತ ಪ್ರಮುಖ ತೈಲ ಸಂಸ್ಥೆಗಳಾದ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್, ನಯಾರಾ ಹಾಗೂ ಶೆಲ್ ಸಂಸ್ಥೆಗಳ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಎನ್ಎಬಿಎಲ್ (NABL) ಮಾನ್ಯತೆ ಪಡೆದ ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ತಪಾಸಣೆಗೊಳಪಡಿಸಿದಾಗ ಈ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಎಥನಾಲ್ ಪ್ರಮಾಣ ಹೆಚ್ಚಿರುವುದು ದೃಢಪಟ್ಟಿದೆ.

ಎಥನಾಲ್ ಪ್ರಮಾಣ ಉಲ್ಲಂಘನೆ: ಐಒಸಿಎಲ್ ಪೆಟ್ರೋಲ್‌ನಲ್ಲಿ ಗರಿಷ್ಠ % 31.2, ಎಚ್‌ಪಿಸಿಎಲ್‌ನಲ್ಲಿ % 30.5 (ಎಂಎಸ್-ಪವರ್), ಬಿಪಿಸಿಎಲ್‌ನಲ್ಲಿ % 26.5, ನಯಾರಾ ಪೆಟ್ರೋಲ್‌ನಲ್ಲಿ % 26.1 ಹಾಗೂ ಶೆಲ್ ಪೆಟ್ರೋಲ್‌ನಲ್ಲಿ % 25.5 ರಷ್ಟು ಎಥನಾಲ್ ಪತ್ತೆಯಾಗಿದೆ.

ಸಾರ್ವಜನಿಕರಿಗೆ ಕೋಟ್ಯಂತರ ರೂ. ನಷ್ಟ: ಮೈಲೇಜ್ % 10 ರಷ್ಟು ಕಡಿಮೆಯಾಗುವುದರಿಂದ ವಾಹನ ಸವಾರರಿಗೆ ವಾರ್ಷಿಕ 62,000 ಕೋಟಿ ರೂ. ಇಂಧನ ನಷ್ಟ ಹಾಗೂ ಹೆಚ್ಚುವರಿ ವಾಹನ ರಿಪೇರಿ ಮತ್ತು ಸರ್ವಿಸಿಂಗ್‌ಗೆ 39,000 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಪರಿಹಾರ ನಿಧಿಗೆ ಆಗ್ರಹ: ತೈಲ ಕಂಪನಿಗಳ ಅಕ್ರಮದಿಂದ ಗ್ರಾಹಕರ ಮೇಲಾಗುತ್ತಿರುವ ಆರ್ಥಿಕ ಹೊರೆ ನಿವಾರಿಸಲು ಕೇಂದ್ರ ಸರ್ಕಾರ ತಕ್ಷಣವೇ ಪರಿಹಾರ ನಿಧಿ ಸ್ಥಾಪಿಸಬೇಕು ಮತ್ತು ಸರಬರಾಜಾಗುತ್ತಿರುವ ಪೆಟ್ರೋಲ್‌ನ ನೈಜ ಎಥನಾಲ್ ಪ್ರಮಾಣವನ್ನು ಬಹಿರಂಗಪಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.

ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳ ಬಗ್ಗೆ ತೈಲ ಕಂಪನಿಗಳಿಗೆ ಪ್ರಶ್ನೆಗಳನ್ನು ಕಳುಹಿಸಿದರೂ ಸೂಕ್ತ ಉತ್ತರ ನೀಡದ ಕಾರಣ ಸರ್ಕಾರ ಖಾಸಗಿ ಪ್ರಯೋಗಾಲಯದಲ್ಲಿ ಸ್ವತಂತ್ರ ತಪಾಸಣೆ ನಡೆಸಿದೆ. ಸಾರ್ವಜನಿಕ ಗ್ರಾಹಕರ ಹಿತರಕ್ಷಣೆಗಾಗಿ ಇಂಧನ ಗುಣಮಟ್ಟ ಪರಿಶೀಲನೆ ಹಾಗೂ ನಿಯಂತ್ರಣ ಕಟ್ಟುನಿಟ್ಟಾಗಬೇಕು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles