Home ಕ್ರೈಂ ನ್ಯೂಸ್ ರೀಲ್ಸ್ ಸುಂದರಿ ಹಾಗೂ ಪ್ರಿಯಕರನ ಶವ ರೈಲ್ವೆ ಹಳಿ ಮೇಲೆ ಪತ್ತೆ: ಅಕ್ರಮ ಸಂಬಂಧದ ಅಂತ್ಯವೇ ದುರಂತ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೀಲ್ಸ್ ಸುಂದರಿ ಹಾಗೂ ಪ್ರಿಯಕರನ ಶವ ರೈಲ್ವೆ ಹಳಿ ಮೇಲೆ ಪತ್ತೆ: ಅಕ್ರಮ ಸಂಬಂಧದ ಅಂತ್ಯವೇ ದುರಂತ?

Share
ಪ್ರಿಯಕರ
Share

ಮಂಡ್ಯ: ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮತ್ತೊಬ್ಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು, ತನ್ನ ಪ್ರಿಯಕರನೊಂದಿಗೆ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಮಂಡ್ಯ ಹೊರವಲಯದಲ್ಲಿ ನಡೆದಿದೆ. ಇಬ್ಬರೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೂಲತಃ ಮಂಡ್ಯ ಜಿಲ್ಲೆಯ ಗುನ್ನಾಯಕನಹಳ್ಳಿಯ ನಿವಾಸಿ ಸಹನಾ (ಮಹಿಳೆ) ಹಾಗೂ ಬೆಂಗಳೂರಿನಲ್ಲಿ ಆಕೆಯ ವಾಸವಿದ್ದ ಮನೆಯ ಮೇಲ್ಭಾಗದಲ್ಲಿದ್ದ ರಾಹುಲ್ ಎಂಬ ಯುವಕ ಮೃತಪಟ್ಟ ದುರ್ದೈವಿಗಳು. ಸಹನಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುತ್ತಾ ಸಕ್ರಿಯವಾಗಿದ್ದರು.

ಅಕ್ರಮ ಪ್ರೇಮದ ಅಂತ್ಯ: ಇಬ್ಬರ ನಡುವಿನ ಪ್ರೀತಿ ವಿಷಯ ಕುಟುಂಬದವರಿಗೆ ತಿಳಿದು ಜಗಳವಾಗಿದ್ದರಿಂದ ಮನೆ ಬದಲಾಯಿಸಿದರೂ, ಇವರ ಪ್ರೇಮ ಸಂಬಂಧ ಮುಂದುವರೆದಿತ್ತು.

ರೈಲ್ವೆ ಹಳಿ ಮೇಲೆ ಶವ ಪತ್ತೆ: ಪತಿಯೊಂದಿಗೆ ಜಗಳವಾಡಿ ತವರು ಮನೆಗೆ ಬಂದಿದ್ದ ಸಹನಾ ಹಾಗೂ ರಾಹುಲ್ ಅವರ ಮೃತದೇಹಗಳು ಮಂಡ್ಯ ಹೊರವಲಯದ ರೈಲ್ವೆ ಹಳಿ ಮೇಲೆ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಪೊಲೀಸ್ ತನಿಖೆ ಆರಂಭ: ವಿಷಯ ತಿಳಿದ ಮಂಡ್ಯ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles