Home ಉದ್ಯೋಗ ವಾರ್ತೆ ಅಗ್ನಿಪತ್‌ ಯೋಜನೆಯಲ್ಲಿ ಮಹತ್ವದ ತಿದ್ದುಪಡಿ: ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಎರಡು ವರ್ಷಗಳ ಹೆಚ್ಚುವರಿ ಸೇವಾ ಅವಕಾಶ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಅಗ್ನಿಪತ್‌ ಯೋಜನೆಯಲ್ಲಿ ಮಹತ್ವದ ತಿದ್ದುಪಡಿ: ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಎರಡು ವರ್ಷಗಳ ಹೆಚ್ಚುವರಿ ಸೇವಾ ಅವಕಾಶ

Share
ಅಗ್ನಿಪತ್‌
Share

ನವದೆಹಲಿ: ಅಗ್ನಿಪತ್‌ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪ್ರಮುಖ ತಿದ್ದುಪಡಿಗಳನ್ನು ತಂದಿದ್ದು, ಹೊಸದಾಗಿ ಪ್ರಕಟಿಸಲಾಗಿರುವ ಬದಲಾವಣೆಗಳು ಪ್ರಸ್ತುತ ಸೇವೆಯಲ್ಲಿರುವ 9 ಬ್ಯಾಚ್‌ಗಳ ಅಗ್ನಿವೀರರಿಗೆ ಮಾತ್ರ ಅನ್ವಯವಾಗಲಿದೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

2026ರ ಡಿಸೆಂಬರ್ ನಂತರ ಹೊಸದಾಗಿ ಸೇನೆಗೆ ಸೇರ್ಪಡೆಗೊಳ್ಳುವವರಿಗೆ ಮೂಲ ಮಾದರಿಯಂತೆ 4 ವರ್ಷಗಳ ಸೇವಾವಧಿ ಮುಂದುವರಿಯಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ.

ಪ್ರಸ್ತುತ ಸೇವೆಯಲ್ಲಿರುವ ಅಗ್ನಿಪೀರರ ಮೊದಲ ಶೇ. 25ರಷ್ಟು ಸಿಬ್ಬಂದಿ ಹಿಂದಿನಂತೆ 4 ವರ್ಷಗಳ ನಂತರ ನೇರ ನಿಯಮಿತ ಕೇಡರ್‌ಗೆ (Regular Cadre) ಸೇರ್ಪಡೆಗೊಳ್ಳಲಿದ್ದಾರೆ. ಉಳಿದ ಶೇ. 75ರಷ್ಟು ಸಿಬ್ಬಂದಿಗೆ ಹೆಚ್ಚುವರಿಯಾಗಿ 2 ವರ್ಷಗಳ ಎರಡನೇ ಅವಧಿಯ ಸೇವೆಯನ್ನು ನೀಡಲಾಗುತ್ತಿದ್ದು, ಈ ಅವಧಿ ಪೂರ್ಣಗೊಂಡ ಬಳಿಕ ಅವರ ದೈಹಿಕ ಫಿಟ್‌ನೆಸ್ ಹಾಗೂ ಶಿಸ್ತಿನ ಆಧಾರದ ಮೇಲೆ ಯಾವುದೇ ಮಿತಿಯಿಲ್ಲದೆ ನೇಮಿತ ಪಡೆಗೆ ಸೇರಿಸಿಕೊಳ್ಳಲಾಗುವುದು.

ಅರ್ಹತೆ ಮತ್ತು ಕಟ್ಟುನಿಟ್ಟು: ಎರಡು ವರ್ಷಗಳ ಹೆಚ್ಚುವರಿ ಸೇವೆಯ ಬಳಿಕ ನಿಯಮಿತ ಸೈನಿಕರಾಗಲು ದೈಹಿಕ ಫಿಟ್‌ನೆಸ್ ಮತ್ತು ಉತ್ತಮ ಶಿಸ್ತಿನ ದಾಖಲೆ ಕಡ್ಡಾಯಗೊಳಿಸಲಾಗಿದೆ.

ಹೊಸ ನೇಮಕಾತಿ ನಿಯಮ: 2026ರ ಡಿಸೆಂಬರ್ ನಂತರ ಸೇನೆಗೆ ಸೇರುವ ಹೊಸ ಅಭ್ಯರ್ಥಿಗಳಿಗೆ ಹಳೆಯ 4 ವರ್ಷಗಳ ಅಗ್ನಿಪತ್ ನಿಯಮವೇ ಅನ್ವಯವಾಗಲಿದೆ.

ಹಿರಿಯತನ ರಕ್ಷಣೆ: ಹೆಚ್ಚುವರಿ 2 ವರ್ಷಗಳ ಸೇವೆ ಪೂರ್ಣಗೊಳಿಸಿ ನಿಯಮಿತ ಸೈನಿಕರಾಗುವವರಿಗೆ ಅದೇ ಬ್ಯಾಚ್‌ನ ಹಿರಿಯತನ ಸಿಗಲಿದ್ದು, ಕಿರಿಯ ಬ್ಯಾಚ್‌ಗಳ ಕೆಳಗೆ ಬರುವುದಿಲ್ಲ.

ಈ ಬದಲಾವಣೆಗಳು ಯೋಜನೆಯ ಸಂಪೂರ್ಣ ಹಿಂಪಡೆತ ಅಲ್ಲದೆ, ಪ್ರಸ್ತುತ ಸೇವೆಯಲ್ಲಿರುವವರಿಗೆ ಕಲ್ಪಿಸಲಾದ ತಾತ್ಕಾಲಿಕ ಪರಿವರ್ತನಾ ವ್ಯವಸ್ಥೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles