Home ದಾವಣಗೆರೆ ದೀಪಾವಳಿ ಎಂದರೆ ಕೇವಲ ಮನೆಯ ಸ್ವಚ್ಛತೆಯಷ್ಟೇ ಅಲ್ಲ; ನಿಮ್ಮ ಆರ್ಥಿಕ ವ್ಯವಸ್ಥೆಯ ಹೂಡಿಕೆ ಸರಿಪಡಿಸಲು ನೀವು ತಪ್ಪದೇ ಮಾಡಬೇಕಾದ ಕೆಲಸಗಳಿವು!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ದೀಪಾವಳಿ ಎಂದರೆ ಕೇವಲ ಮನೆಯ ಸ್ವಚ್ಛತೆಯಷ್ಟೇ ಅಲ್ಲ; ನಿಮ್ಮ ಆರ್ಥಿಕ ವ್ಯವಸ್ಥೆಯ ಹೂಡಿಕೆ ಸರಿಪಡಿಸಲು ನೀವು ತಪ್ಪದೇ ಮಾಡಬೇಕಾದ ಕೆಲಸಗಳಿವು!

Share
ದೀಪಾವಳಿ
Share

ನವದೆಹಲಿ: ದೀಪಾವಳಿ ಎಂದರೆ ಹೊಸ ಆರಂಭ ಹಾಗೂ ಸಡಗರದ ಸಂಕೇತ. ಆದರೆ ಕೊನೆಯ ಬಾರಿಗೆ ನಿಮ್ಮ ಹಣಕಾಸು ಹಾಗೂ ಹೂಡಿಕೆಗಳ ಬಗ್ಗೆ ಯಾವಾಗ ಯೋಚಿಸಿದ್ದೀರಿ? ಮನೆಯನ್ನು ಗುಡಿಸಿ ಗುಂಡಂತರ ಮಾಡುವಂತೆ, ಮರೆತುಹೋದ ಬ್ಯಾಂಕ್ ಖಾತೆಗಳು, ಬಳಕೆಯಲ್ಲಿಲ್ಲದ ಸಬ್‌ಸ್ಕ್ರಿಪ್ಶನ್‌ಗಳು ಹಾಗೂ ಹಳೆಯ ಹೂಡಿಕೆಗಳನ್ನು ಪರಿಶೀಲಿಸಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೊಸ ದಾರಿಗೆ ತರಲು ಈ ಹಬ್ಬದ ಕಾಲವೇ ಅತ್ಯುತ್ತಮ ಸಮಯವಾಗಿದೆ.

ಹಣಕಾಸಿನ ಸರಿಯಾದ ನಿರ್ವಹಣೆಯಿಂದ ಅನಗತ್ಯ ವೆಚ್ಚಗಳನ್ನು ತಪ್ಪಿಸಬಹುದು ಮತ್ತು ತುರ್ತು ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಸ್ಪಷ್ಟತೆ ಸಿಗುವಂತೆ ನೋಡಿಕೊಳ್ಳಬಹುದು. ನಾಮಿನಿ ಪರಿಶೀಲನೆಯಿಂದ ಹಿಡಿದು ಸಾಲ ಹಾಗೂ ವಿಮಾ ಪಾಲಿಸಿಗಳ ಅವಲೋಕನದವರೆಗೆ, ಈ ದೀಪಾವಳಿಗೆ ನೀವು ತಪ್ಪದೇ ಮಾಡಬೇಕಾದ 5 ಪ್ರಮುಖ ಹಣಕಾಸು ಪರಿಶೀಲನೆಗಳು ಇಲ್ಲಿವೆ.

ನಾಮಿನಿ ವಿವರಗಳ ನವೀಕರಣ: ಉಳಿತಾಯ ಖಾತೆಗಳು, ಎಫ್‌ಡಿ, ಮ್ಯೂಚುಯಲ್ ಫಂಡ್‌ಗಳು, ಡಿಮ್ಯಾಟ್ ಹಾಗೂ ವಿಮಾ ಪಾಲಿಸಿಗಳಲ್ಲಿ ನಾಮಿನಿ ಹೆಸರು ಸರಿಯಾಗಿದೆಯೆ ಎಂದು ಪರಿಶೀಲಿಸಿ. ಮದುವೆ ಅಥವಾ ಮಗುವಿನ ಜನನದ ಬಳಿಕ ಬದಲಾವಣೆಗಳನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡಿ.

ಬಳಕೆಯಲ್ಲಿಲ್ಲದ ಚಂದಾದಾರಿಕೆಗಳಿಗೆ ಕತ್ತರಿ: ನೀವು ಬಳಸದ ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಆ್ಯಪ್‌ಗಳು ಹಾಗೂ ಯುಪಿಐ ಆಟೋಪೇ ಮೂಲಕ ಕಡಿತವಾಗುತ್ತಿರುವ ಅನಗತ್ಯ ಮ್ಯಾಂಡೇಟ್‌ಗಳನ್ನು ರದ್ದುಗೊಳಿಸಿ.

ಮರೆತುಹೋದ ಹಣ ಹಾಗೂ ಖಾತೆಗಳ ಹುಡುಕಾಟ: ಆರ್‌ಬಿಐನ ‘ಉದ್ಗಮ್’ (UDGAM) ಪೋರ್ಟಲ್ ಬಳಸಿ ಹಳೆಯ ಖಾತೆಗಳ ಕ್ಲೈಮ್ ಮಾಡದ ಡೆಪಾಸಿಟ್‌ಗಳನ್ನು ಹುಡುಕಿ. ಜತೆಗೆ ಐಇಪಿಎಫ್  ವೆಬ್‌ಸೈಟ್ ಮೂಲಕ ಮರೆತುಹೋದ ಷೇರು ಹಾಗೂ ಲಾಭಾಂಶಗಳನ್ನು ಪತ್ತೆ ಹಚ್ಚಿ.

ತುರ್ತು ನಿಧಿಗಾಗಿ ಕನಿಷ್ಠ 6 ತಿಂಗಳ ಅಗತ್ಯ ಖರ್ಚುಗಳನ್ನು ಮೀಸಲಿಡಿ ಮತ್ತು ಕ್ರೆಡಿಟ್ ಕಾರ್ಡ್ ಬಾಕಿ ಸೇರಿದಂತೆ ದುಬಾರಿ ಸಾಲಗಳನ್ನು ಆದಷ್ಟು ಬೇಗ ತೀರಿಸಿ ನಿಮ್ಮ ಆರ್ಥಿಕ ಭದ್ರತೆಯನ್ನು ದೃಢಪಡಿಸಿಕೊಳ್ಳಿ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles