Home ಕ್ರೈಂ ನ್ಯೂಸ್ “ಕಾಂಗ್ರೆಸ್ ನಾಯಕರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆಂದ” ಛಲವಾದಿ ನಾರಾಯಣಸ್ವಾಮಿ: ‘ಮಿದುಳು ಮತ್ತು ನಾಲಗೆಗೆ ಕನೆಕ್ಷನ್ ಇಲ್ಲ, ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರಿಯಾಂಕ್ ಖರ್ಗೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಕಾಂಗ್ರೆಸ್ ನಾಯಕರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆಂದ” ಛಲವಾದಿ ನಾರಾಯಣಸ್ವಾಮಿ: ‘ಮಿದುಳು ಮತ್ತು ನಾಲಗೆಗೆ ಕನೆಕ್ಷನ್ ಇಲ್ಲ, ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರಿಯಾಂಕ್ ಖರ್ಗೆ!

Share
ಛಲವಾದಿ ನಾರಾಯಣಸ್ವಾಮಿ
Share

ಬೆಂಗಳೂರು/ಕಲಬುರಗಿ: ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನೇರವಾದ ಕೊಲೆ ಬೆದರಿಕೆ ಹಾಗೂ ಕೊಲೆಗೆ ಪ್ರಚೋದನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್ (RSS) ತಾಳಕ್ಕೆ ತಕ್ಕಂತೆ ನುಡಿಯುವ ಇವರ ಮಿದುಳು ಮತ್ತು ನಾಲಗೆಗೆ ಯಾವುದೇ ಕನೆಕ್ಷನ್ ಇಲ್ಲ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಿಯಾಂಕ್ ಖರ್ಗೆ, ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ಜೈಲು ಸೇರಿ ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆ: ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಡಿದ್ದ ಕಠಿಣ ಮಾತುಗಳು ಮತ್ತು ‘ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂಬ ಪದಪ್ರಯೋಗವು ರಾಜ್ಯದಲ್ಲಿ ಭಾರಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಗೃಹ ಸಚಿವರ ಎಚ್ಚರಿಕೆ: ಇದು ಕೇವಲ ರಾಜಕೀಯ ಟೀಕೆಯಲ್ಲ, ಬದಲಿಗೆ ಹತ್ಯೆಗೆ ಪ್ರಚೋದನೆ ನೀಡುವ ನೇರ ಬೆದರಿಕೆಯಾಗಿದೆ. ಕಾನೂನು ಮೀರಿ ವರ್ತಿಸಿದರೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಪ್ರಿಯಂಚ ಖರ್ಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ: ಬಿಜೆಪಿ ನಾಯಕರು ಸ್ವಂತ ಬುದ್ಧಿಯಿಂದ ಮಾತನಾಡದೆ, ಆರ್‌ಎಸ್‌ಎಸ್ ನಿರ್ದೇಶನದಂತೆ ಇಂತಹ ಹಿಂಸಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.

Share

Recent Posts

Recent Comments

No comments to show.
Related Articles