Home ದಾವಣಗೆರೆ ಗ್ಯಾರಂಟಿ ಯೋಜನೆಗಳು ಅಸಾಧ್ಯ ಎಂದವರಿಗೆ ನುಡಿದಂತೆ ನಡೆದು ತೋರಿಸಿದ್ದೇವೆ: ಹಿರಿಯೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಗ್ಯಾರಂಟಿ ಯೋಜನೆಗಳು ಅಸಾಧ್ಯ ಎಂದವರಿಗೆ ನುಡಿದಂತೆ ನಡೆದು ತೋರಿಸಿದ್ದೇವೆ: ಹಿರಿಯೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು!

Share
ಗ್ಯಾರಂಟಿ
Share

ಹಿರಿಯೂರು: “ನಾವು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಕೆಲವರು ನಕ್ಕರು. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ಹಾದಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಪ್ರಧಾನಮಂತ್ರಿಗಳು ಈ ಯೋಜನೆಗಳ ಜಾರಿ ಅಸಾಧ್ಯ ಎಂದರು. ನಾವು ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದು ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮನೆ ಯಜಮಾನಿಯರಿಗೆ ಮಾಸಿಕ 2 ಸಾವಿರ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅನ್ನಭಾಗ್ಯದಲ್ಲಿ 10 ಕೆ.ಜಿ, ನಿರುದ್ಯೋಗ ಯುವಕರಿಗೆ ಯುವನಿಧಿ ನೀಡುತ್ತಿದ್ದೇವೆ. ಇಂತಹ ಒಂದು ಕೆಲಸವನ್ನು ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ನೀಡಿವೆಯೇ?” ಎಂದು ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನನಗೆ ಕನಕಪುರದಷ್ಟೇ, ಹಿರಿಯೂರು ಮುಖ್ಯ

“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಈ ಯೋಜನೆಗಳು ಜಾರಿಗೆ ಬಂದವು. ಜತೆಗೆ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಧರ್ಮಾಪುರ ಹೊಬಳಿಗಳ ಕೆರೆ ತುಂಬಿಸಿ ಈ ಭಾಗದ ರೈತರ ಬದುಕು ಬದಲಿಸುವ ಐತಿಹಾಸಿಕ ತೀರ್ಮಾನ ಮಾಡಿರುವುದು ನಿಮ್ಮ ಸರ್ಕಾರ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನೀವು ಇಂದು ಕೊಟಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುವೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ. ನಿಮ್ಮ ಸೇವೆಗೆ ನಾನು ಬದ್ಧನಾಗಿದ್ದೇನೆ” ಎಂದರು.

ಪ್ರತ್ಯೇಕ ತಾಲ್ಲೂಕು ರಚನೆ ಬೇಡಿಕೆ ಬಗ್ಗೆ ಪರಿಶೀಲನೆ

“ನೀವು ತಾಲ್ಲೂಕು ವಿಚಾರ ಕೇಳಿದ್ದೀರಿ. ನಿಮ್ಮ ಮನವಿ ಬಗ್ಗೆ ನಮಗೆ ಚಿಂತನೆ ಇದೆ. ಯಾವ ಹೊಬಳಿಗಳನ್ನು ಸೇರಿಸಿಕೊಂಡು ಎಷ್ಟು ಜನಸಂಖ್ಯೆಯೊಂದಿಗೆ ತಾಲ್ಲೂಕು ಮಾಡಬೇಕು ಎಂದು ನನಗೆ ಆಲೋಚನೆ ಇದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಾಗ ಏಯಿತು? ಚನ್ನಪಟ್ಟಣದಲ್ಲಿ ಕುಮಾರಣ್ಣನ ಮಗನನ್ನು ಬಲವಂತವಾಗಿ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಯೋಗೇಶ್ವರ್ ಅವರು 25 ಸಾವಿರ ಅಂತರದಲ್ಲಿ ಗೆದ್ದರು. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರನ ವಿರುದ್ಧ ಪೈಲ್ವಾನ್ ಪಠಾಣ್ ಅವರು ಗೆದ್ದರು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಜನ ಸೋಲಿಸಿದರು. ಇಲ್ಲೂ ಯಾರು ಬಂದು ನಿಲ್ಲುತ್ತಾರೋ ನಿಲ್ಲಲಿ. ಯಾವುದೇ ದೊಡ್ಡ ನಾಯಕರು ಬೇಕಾದರೂ ಬಂದು ನಿಲ್ಲಲಿ. ಆದರೆ ನಿಮ್ಮ ಋಣ ತೀರಿಸಲು ನಾನು, ನಮ್ಮ ಸರ್ಕಾರ ನಿಮ್ಮ ಜತೆ ಇದೆ. ಇಲ್ಲಿರುವ ಎಲ್ಲಾ ಪಕ್ಷಗಳ ನಾಯಕರಿಗೆ ಒಂದು ಮಾತು ಹೇಳುತ್ತೇನೆ. ಆ ಪಕ್ಷ ಈಗ ಏನು ಆಗುವುದಿಲ್ಲ. ಈ ರಾಜ್ಯದಲ್ಲಿ 2028ರಲ್ಲೂ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಅಧಿಕಾರ ಇದ್ದಾಗಲೇ ಏನೂ ಮಾಡಲಿಲ್ಲ, ಅಧಿಕಾರ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ? ಎಂದು ಹಳ್ಳಿಗಳಲ್ಲಿ ಎಲ್ಲರಿಗೂ ಹೇಳಿ ನಮ್ಮ ಪಕ್ಷಕ್ಕೆ ಕೆರೆದುಕೊಂಡು ಬನ್ನಿ” ಎಂದು ಕರೆ ನೀಡಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles