Home ಕ್ರೈಂ ನ್ಯೂಸ್ ಮಹಾರಾಷ್ಟ್ರ ಹಾಗೂ ದಾವಣಗೆರೆಯಲ್ಲಿ ಮನೆ ಕಳ್ಳತನ: ಕೆಟಿಜೆ ನಗರ ಪೊಲೀಸರಿಂದ ಖತರ್ನಾಕ್ ಕಳ್ಳನ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಹಾರಾಷ್ಟ್ರ ಹಾಗೂ ದಾವಣಗೆರೆಯಲ್ಲಿ ಮನೆ ಕಳ್ಳತನ: ಕೆಟಿಜೆ ನಗರ ಪೊಲೀಸರಿಂದ ಖತರ್ನಾಕ್ ಕಳ್ಳನ ಬಂಧನ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರದ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತರರಾಜ್ಯ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫಿರ್ಯಾದುದಾರರಾದ ಫಕೀರ್ ಸ್ವಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ದಿನಾಂಕ 20.07.2026 ರಂದು ದೂರುದಾರರು ತಮ್ಮ ಮನೆಯನ್ನು ಬೀಗ ಹಾಕಿ ಹುಬ್ಬಳ್ಳಿಗೆ ತೆರಳಿದ್ದ ವೇಳೆ, ಕಳ್ಳರು ಮನೆಯ ಬೀಗ ಮುರಿದು ಒಟ್ಟು 4,75,000 ರೂ. ಮೌಲ್ಯದ 58 ಗ್ರಾಂ ತೂಕದ ಚಿನ್ನದ ಆಭರಣಗಳು, 100 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್ ಹಾಗೂ 3,200 ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪಿ ಬಂಧನ: ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡ ಪೊಲೀಸರು, ಬಾವಲಿಕೋಟಿ ವಿಕಾಸ ಸಂಜಯ್ ಗಾಂಧಿ ನಗರದ ಚಿಕ್ಕೋಡಿ (ಬೆಳಗಾವಿ ಜಿಲ್ಲೆ) ಮೂಲದ ಹಾಗೂ ಪ್ರಸ್ತುತ ಮಹಾರಾಷ್ಟ್ರದ ಆರ್.ಕೆ. ನಗರ ವಾಸಿ ತೌಫೀಕ್ ಶೇಖ್ @ ತೌಫಿಕ್ ಮಹಮದ್ ಶೇಖ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.

ಅಂತರರಾಜ್ಯ ಕಳ್ಳತನ ಪತ್ತೆ: ವಿಚಾರಣೆ ವೇಳೆ ಆರೋಪಿಯು ದಾವಣಗೆರೆ ನಗರದಲ್ಲಿ 2 ಮನೆ ಕಳ್ಳತನ ಮಾಡಿರುವುದಾಗಿ ಹಾಗೂ ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಮಹಾರಾಷ್ಟ್ರದ ಕೊಲ್ಲಾಪುರದಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯಿಬಿಟ್ಟಿದ್ದಾನೆ.

ಅಧಿಕಾರಿಗಳ ಪ್ರಶಂಸೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ. ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್.ಹೆಚ್ ಮತ್ತು ಡಿವೈಎಸ್ಪಿ ಮಾರ್ಗದರ್ಶನದಲ್ಲಿ, ಕೆ.ಟಿ.ಜೆ. ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮೇಘರಾಜ್.ಎಂ.ವಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು, ಹಿರಿಯ ಅಧಿಕಾರಿಗಳು ಇವರನ್ನು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles