Home ಕ್ರೈಂ ನ್ಯೂಸ್ ಅನೈತಿಕ ರಾಜಕಾರಣ ಹಾಗೂ ಬೋಗಸ್ ವ್ಯಕ್ತಿಗಳಿಂದ ಸರ್ಕಾರದ ಕೀರ್ತಿಗೆ ಕಳಂಕ ತರಲು ಬಿಡುವುದಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನೈತಿಕ ರಾಜಕಾರಣ ಹಾಗೂ ಬೋಗಸ್ ವ್ಯಕ್ತಿಗಳಿಂದ ಸರ್ಕಾರದ ಕೀರ್ತಿಗೆ ಕಳಂಕ ತರಲು ಬಿಡುವುದಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಸರ್ಕಾರದಲ್ಲಿ ಯಾವುದೇ ಆಡಳಿತಾತ್ಮಕ ನ್ಯೂನ್ಯತೆಗಳು ಅಥವಾ ತಪ್ಪುಗಳಿದ್ದರೆ ವಿಷಯಾಧಾರಿತ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿ ಚರ್ಚಿಸಲಾಗುವುದು, ಆದರೆ ಅನೈತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಅನೀತಿಯ ರಾಜಕಾರಣ ಮಾಡಿದರೆ ಖಂಡಿತಾ ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೇ ಎಚ್ಚರಿಕೆ ನೀಡಿದ್ದಾರೆ. 

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ತಮ್ಮದೇ ಆದ ವರ್ಚಸ್ವಿ ರಾಜಕಾರಣದ ಪರಂಪರೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅತ್ಯಂತ ಕ್ರಿಯಾಶೀಲವಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವರ್ಚಸ್ಸಿಗೆ ಹಾಗೂ ಕಾಂಗ್ರೆಸ್ ಪಕ್ಷದ ಕೀರ್ತಿಗೆ ಬೋಗಸ್ ವ್ಯಕ್ತಿಗಳಿಂದ ಕಳಂಕ ತರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷ ಹಾಗೂ ಸರ್ಕಾರದ ಕೀರ್ತಿಯನ್ನು ಎತ್ತಿಹಿಡಿಯುವುದು ತಮ್ಮ ಬದ್ಧತೆ, ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಷಯಾಧಾರಿತ ಟೀಕೆಗಳಿಗೆ ಸ್ವಾಗತ: ಆಡಳಿತಾತ್ಮಕ ಲೋಪಗಳಿದ್ದರೆ ಮುಕ್ತ ಚರ್ಚೆಗೆ ಸಿದ್ಧರಿದ್ದೇವೆ, ಆದರೆ ಅನೈತಿಕ ರಾಜಕಾರಣವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ನಾಯಕರ ವರ್ಚಸ್ಸು ರಕ್ಷಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವರ್ಚಸ್ಸಿಗೆ ಹಾಗೂ ಸರ್ಕಾರದ ಕೀರ್ತಿಗೆ ಧಕ್ಕೆ ತರುವ ಯತ್ನಗಳನ್ನು ಬಲವಾಗಿ ವಿರೋಧಿಸಲಾಗುವುದು.

ಗೃಹ ಸಚಿವರ ಬದ್ಧತೆ: ಸರ್ಕಾರದ ಹಾಗೂ ಪಕ್ಷದ ಪರಂಪರೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ಗೃಹ ಸಚಿವನಾಗಿ ತನ್ನ ಪ್ರಮುಖ ಕರ್ತವ್ಯ ಎಂದು ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles