ಸೂರತ್: ಮನೆಯಲ್ಲಿ ನಡೆದ ಕ್ಷುಲ್ಲಕ ಜಗಳದ ವೇಳೆ ತಂದೆ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದು ಒಡೆದಿದ್ದಕ್ಕೆ ಕೋಪಗೊಂಡ 22 ವರ್ಷದ ಮಗಳು ಕುಕ್ಕರ್ ಮುಚ್ಚಳ ಮತ್ತು ಅಡುಗೆಮನೆಯ ಚಾಕುವಿನಿಂದ ಹಲ್ಲೆ ನಡೆಸಿ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ನ ಸೂರತ್ನ ಅಮ್ರೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ಟೋಬರ್ 31 ರಂದು ರಾತ್ರಿ ಕೋಸಾದ್ ಆವಾಸ್ ಪ್ರದೇಶದ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ರಮೇಶ್ ಸಿಂಗ್ ಕೈಲಾಶ್ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದ್ದು, ಆರೋಪಿ ಮಗಳು ಕಾಜಲ್ (22) ಎಂಬಾಕೆಯನ್ನು ಪೊಲೀಸರು ಬಂದಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಜಗಳಕ್ಕೆ ಕಾರಣ: ಮನೆ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗಳ ನಡುವೆ ವಾಗ್ವಾದ ಆರಂಭವಾಗಿತ್ತು.
ದಾಳಿಯ ಸ್ವರೂಪ: ಜಗಳದ ಉಗ್ರ ರೂಪದಲ್ಲಿ ತಂದೆ ಮೊಬೈಲ್ ಎಸೆದಾಗ, ರೊಚ್ಚಿಗೆದ್ದ ಮಗಳು ಮೊದಲು ಕುಕ್ಕರ್ ಮುಚ್ಚಳದಿಂದ ತಂದೆಯ ತಲೆಗೆ ಹೊಡೆದು, ನಂತರ ಚಾಕುವಿನಿಂದ ಹೊರಟ್ಟೆಗೆ ಇರಿದಿದ್ದಾಳೆ.
ಪೊಲೀಸ್ ಕ್ರಮ: ರಕ್ತಸ್ರಾವದಿಂದ ತಂದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತ ಪತ್ನಿ ಮಂಜುಬೆನ್ ನೀಡಿದ ದೂರಿನನ್ವಯ ಅಮ್ರೋಲಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





Leave a comment