Home ದಾವಣಗೆರೆ ರೂ. 24 ಲಕ್ಷ ವೇತನ, 750 ಸಿಬಿಲ್ ಸ್ಕೋರ್ ಇದ್ದರೂ ಗೃಹ ಸಾಲ ತಿರಸ್ಕಾರ: ಬ್ಯಾಂಕ್‌ಗಳು ಗಮನಿಸುವ ಪ್ರಮುಖ ಅಂಶಗಳೇನು?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ರೂ. 24 ಲಕ್ಷ ವೇತನ, 750 ಸಿಬಿಲ್ ಸ್ಕೋರ್ ಇದ್ದರೂ ಗೃಹ ಸಾಲ ತಿರಸ್ಕಾರ: ಬ್ಯಾಂಕ್‌ಗಳು ಗಮನಿಸುವ ಪ್ರಮುಖ ಅಂಶಗಳೇನು?

Share
ಸಿಬಿಲ್ ಸ್ಕೋರ್
Share

ನವದೆಹಲಿ: ಉತ್ತಮ ಸಿಬಿಲ್ ಸ್ಕೋರ್ (CIBIL Score) ಇದ್ದಾಕ್ಷಣ ಸುಲಭವಾಗಿ ಗೃಹ ಸಾಲ (Home Loan) ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದ ಐಟಿ ಉದ್ಯೋಗಿಯೊಬ್ಬರಿಗೆ ಬ್ಯಾಂಕ್ ಶಾಕ್ ನೀಡಿದೆ.

ವರ್ಷಕ್ಕೆ ರೂ. 24 ಲಕ್ಷ ವೇತನ ಹಾಗೂ 750 ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ, ರೂ. 80 ಲಕ್ಷ ಗೃಹ ಸಾಲದ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಿದೆ. ಉತ್ತಮ ವೇತನ ಮತ್ತು ಸ್ಕೋರ್ ಇದ್ದರೂ ಸಾಲ ಯಾಕೆ ತಿರಸ್ಕರಗೊಂಡಿತು ಎಂಬ ಅಚ್ಚರಿಯ ಮಾಹಿತಿ ಇಲ್ಲಿದೆ.

ಭುವನೇಶ್ವರದ 36 ವರ್ಷದ ಐಟಿ ವೃತ್ತಿಪರರೊಬ್ಬರು ಹೊಸ ಮನೆ ಖರೀದಿಸಲು ರೂ. 80 ಲಕ್ಷ ಸಾಲಕ್ಕಾಗಿ ಬ್ಯಾಂಕ್ ಅನ್ನು ಸಂಪರ್ಕಿಸಿದ್ದರು. ಆದರೆ ಆ ವ್ಯಕ್ತಿಯ ಸಲ್ರಾಣಿ (Salary) ಅಥವಾ ಕ್ರೆಡಿಟ್ ಸ್ಕೋರ್ ಸಮಸ್ಯೆಯಾಗಿರಲಿಲ್ಲ. ಬದಲಿಗೆ ಆ ಈಗಾಗಲೇ ಹೊಂದಿರುವ ಅಧಿಕ ಸಾಲದ ಸುಳಿ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಆ ವ್ಯಕ್ತಿ ಈಗಾಗಲೇ ಪ್ರತಿ ತಿಂಗಳು ಸುಮಾರು ರೂ. 1 ಲಕ್ಷವನ್ನು ವಿವಿಧ ಸಾಲಗಳ ಇಎಂಐ ಪಾವತಿಸುವುದಕ್ಕೇ ಖರ್ಚು ಮಾಡುತ್ತಿದ್ದರು.

ಇಎಂಐ ಹೊರೆ : ಅರ್ಜಿದಾರರ ಒಟ್ಟು ಮಾಸಿಕ ವೇತನ ರೂ. 2 ಲಕ್ಷ (ಕೈಗೆ ಸಿಗುವುದು ರೂ. 1.55 ಲಕ್ಷ). ಆದರೆ ಈಗಾಗಲೇ ತಿಂಗಳಿಗೆ ರೂ. 1 ಲಕ್ಷ ಇಎಂಐ ಕಟ್ಟುತ್ತಿರುವುದರಿಂದ ಕೈಯಲ್ಲಿ ಕೇವಲ ರೂ. 55,000 ಮಾತ್ರ ಉಳಿಯುತ್ತಿತ್ತು.

ಹೊಸ ಇಎಂಐ ಸಮಸ್ಯೆ: ರೂ. 80 ಲಕ್ಷ ಸಾಲಕ್ಕೆ ಅಂದಾಜು ಶೇ. 8.5 ಬಡ್ಡಿ ದರದಲ್ಲಿ ತಿಂಗಳ ಇಎಂಐ ಸುಮಾರು ರೂ. 69,400 ಆಗುತ್ತದೆ. ಇದನ್ನು ಇಎಂಐ ಜತೆಗೆ ಸೇರಿದರೆ ಒಟ್ಟು ತಿಂಗಳ ಕಂತು ರೂ. 1.69 ಲಕ್ಷವಾಗುತ್ತದೆ. ಇದು ಆ ವ್ಯಕ್ತಿಯ ಇಡೀ ಕೈ-ಸಂಬಳಕ್ಕಿಂತ ಹೆಚ್ಚಾಗಿದೆ.

FOIR (Fixed Obligation to Income Ratio): ಬ್ಯಾಂಕ್‌ಗಳು ಸಾಲ ನೀಡುವಾಗ ಆದಾಯ ಮತ್ತು ಈಗಾಗಲೇ ಇರುವ ಸಾಲಗಳ ಅನುಪಾತವನ್ನು ಪರಿಶೀಲಿಸುತ್ತವೆ. ಸಾಮಾನ್ಯವಾಗಿ ಆದಾಯದ ಶೇ. 40 ರಿಂದ 55 ರಷ್ಟು ಮಾತ್ರ ಇಎಂಐಗೆ ಇರಬೇಕು ಎಂದು ಬ್ಯಾಂಕ್‌ಗಳು ನಿಗದಿಪಡಿಸುತ್ತವೆ.

ಆಸ್ತಿಯ ತಾಂತ್ರಿಕ ಮೌಲ್ಯ: ಕೆಲವೊಮ್ಮೆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೂ, ಖರೀದಿಸಲು ಉದ್ದೇಶಿಸಿರುವ ಆಸ್ತಿಯ ಕಾನೂನು ದಾಖಲೆಗಳು, ಮೌಲ್ಯಮಾಪನ (Property Valuation) ಸರಿ ಇಲ್ಲದಿದ್ದರೂ ಸಾಲ ತಿರಸ್ಕರಿಸಲ್ಪಡುತ್ತದೆ.

Share

Leave a comment

Leave a Reply

Your email address will not be published. Required fields are marked *