ಬಂದಾ (ಉತ್ತರ ಪ್ರದೇಶ): ಕುಟುಂಬದ ಆಸ್ತಿ ಹಂಚಿಕೆ ಹಾಗೂ ಭೂಮಿ ವಿಚಾರವಾಗಿ ಆಸ್ತಿಯಿಂದ ಹೊರಹಾಕಿದ್ದಕ್ಕೆ ಕೋಪಗೊಂಡ ಮಗನೊಬ್ಬ ತನ್ನ ಮಾವನ (ತಾಯಿಯ ಸಹೋದರ) ಜೊತೆ ಸೇರಿ ತಂದೆಗೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
ಮಹದೇವ್ ಎಂಬ ಗಾಯಾಳು ನೀಡಿದ ದೂರಿನ ಮೇರೆಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ನಾಡಪಿಸ್ತೂಲ್ ಹಾಗೂ ಕಾಡ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ತಿ ವಿವಾದದ ಪ್ರತಿಕಾರ: ಕುಟುಂಬದ ಆಸ್ತಿಯಿಂದ ಮಗನನ್ನು ತಂದೆ ಮಹದೇವ್ ಒಕ್ಕಲಿಸಿದ್ದರಿಂದ ಆಕ್ರೋಶಗೊಂಡಿದ್ದ ಮಗ, ತನ್ನ ಮಾವನ ಸಹಾಯದಿಂದ ಅಕ್ರಮ ಬಂದೂಕಿನಿಂದ ತಂದೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ಶಸ್ತ್ರಾಸ್ತ್ರ ವಶ ಹಾಗೂ ಬಂಧನ: ಕೃತ್ಯದ ಬಳಿಕ ಸ್ಥಳಕ್ಕೆ ದಾವಿಸಿದ ಪೊಲೀಸರು ಮಹದೇವ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಎಫ್ಐಆರ್ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪೊಲೀಸ್ ಭದ್ರತೆ: ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗದಂತೆ ತಡೆಯಲು ಪೊಲೀಸರು ಬಿಗಿ ಭದ್ರತೆ ಹಾಗೂ ಗಸ್ತು ಹೆಚ್ಚಿಸಿದ್ದಾರೆ.





Leave a comment