Home ಕ್ರೈಂ ನ್ಯೂಸ್ ಗ್ರೈಂಡರ್ ಆಪ್‌ ಡೇಟಿಂಗ್ ಬೆನ್ನಲ್ಲೇ ಆಘಾತ: ಬೆಂಗಳೂರಿನಲ್ಲಿ ಚಾಕು ತೋರಿಸಿ 20 ಲಕ್ಷ ರೂ. ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗ್ರೈಂಡರ್ ಆಪ್‌ ಡೇಟಿಂಗ್ ಬೆನ್ನಲ್ಲೇ ಆಘಾತ: ಬೆಂಗಳೂರಿನಲ್ಲಿ ಚಾಕು ತೋರಿಸಿ 20 ಲಕ್ಷ ರೂ. ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳ ಬಂಧನ!

Share
ಡೇಟಿಂಗ್
Share

ಬೆಂಗಳೂರು: ಡೇಟಿಂಗ್ ಆಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಬೆಂಗಳೂರಿನ ನಿವಾಸಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ, ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ 226 ಗ್ರಾಂ ಚಿನ್ನಾಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ಪಶ್ಚಿಮ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ನಡೆದಿದೆ.

ಅಕ್ಟೋಬರ್ 22 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿ ‘ಗ್ರೈಂಡರ್’  ಆಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ತನ್ನ ಸ್ನೇಹಿತನ ಮನೆಗೆ ಆಹ್ವಾನಿಸಿದ್ದನು. ಸ್ನೇಹಿತ ಹಾಗೂ ಅವರ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದರಿಂದ ಮನೆಯ ಬೀಗವನ್ನು ಈತನಿಗೆ ನೀಡಿದ್ದರು. ಆಹ್ವಾನಿತ ವ್ಯಕ್ತಿ ಮನೆಗೆ ಬಂದು ಮಾಸ್ಕ್ ತೆಗೆದಾಗ ಆತ ತೃತೀಯಲಿಂಗಿ ಎಂಬುದು ತಿಳಿದುಬಂದಿದೆ.

ಕತ್ತಿ ತೋರಿಸಿ ಬೆದರಿಕೆ: ಆಹ್ವಾನಿತ ವ್ಯಕ್ತಿ ಬಂದ 10 ನಿಮಿಷಗಳಲ್ಲೇ ಮತ್ತೊಬ್ಬ ತೃತೀಯಲಿಂಗಿ ಸಹ ಮನೆಗೆ ಬಂದಿದ್ದು, ಇಬ್ಬರೂ ಸೇರಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.

ಬೆಡ್‌ರೂಮ್ ಬಾಗಿಲು ಮುರಿದು ದರೋಡೆ: ದುಷ್ಕರ್ಮಿಗಳು ಬೆಡ್‌ರೂಮ್ ಬಾಗಿಲು ಹಾಗೂ ಕಪಾಟನ್ನು ಒಡೆದು ಅದರಲ್ಲಿದ್ದ 226 ಗ್ರಾಂ ತೂಕದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಆರೋಪಿಗಳ ಬಂಧನ: ಘಟನೆ ತಿಳಿಯುತ್ತಿದ್ದಂತೆ ವಾಪಸ್ ಬಂದ ಮನೆ ಮಾಲೀಕರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಜಿಯಾ ಮತ್ತು ಸೈಯದ್ ಮೌಶಿನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles