Home ಕ್ರೈಂ ನ್ಯೂಸ್ ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಲು ಯತ್ನಿಸಿದ ಪತ್ನಿ, ಸಿಸಿಟಿವಿಯಲ್ಲಿ ಬಯಲಾಯ್ತು ಗೃಹಿಣಿಯ ಭೀಕರ ಹತ್ಯಾ ಸಂಚು: 12 ಬಾರಿ ಚಾಕು ಇರಿದ ಜಿಮ್ ಟ್ರೇನರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಲು ಯತ್ನಿಸಿದ ಪತ್ನಿ, ಸಿಸಿಟಿವಿಯಲ್ಲಿ ಬಯಲಾಯ್ತು ಗೃಹಿಣಿಯ ಭೀಕರ ಹತ್ಯಾ ಸಂಚು: 12 ಬಾರಿ ಚಾಕು ಇರಿದ ಜಿಮ್ ಟ್ರೇನರ್!

Share
ಪತಿ
Share

ಘಾಜಿಯಾಬಾದ್ (ಉತ್ತರ ಪ್ರದೇಶ): ಜಿಮ್ ಟ್ರೇನರ್ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಭೀಕರವಾಗಿ ಕೊಲೆ ಮಾಡಲು ಯತ್ನಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ವಸುಂಧರಾ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇಡೀ ಹತ್ಯಾ ಸಂಚಿನ ರೋಚಕ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸಂತ್ರಸ್ತ ಶಶಾಂಕ್ ಕಾಂಥಾರಿಯಾ ಎಂಬವರನ್ನು ಅವರ ಪತ್ನಿ ಪ್ರಿಯಾ ಶರ್ಮಾ ಹಾಗೂ ಜಿಮ್ ಟ್ರೇನರ್ ಪ್ರತಾಪ್ ಸಿಂಗ್ ಸೇರಿ ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಅಕ್ಟೋಬರ್ 26 ರಂದು ಬೆಳಗಿನ ಜಾವ 5:17ಕ್ಕೆ ಪ್ರಿಯಾ ಕಾರಿನಲ್ಲಿ ಮನೆಯಿಂದ ಹೊರಬಿದ್ದ ತಕ್ಷಣವೇ, ಆಕೆಯ ಸೂಚನೆಯಂತೆ ಜಿಮ್ ಟ್ರೇನರ್ ಪ್ರತಾಪ್ ಸಿಂಗ್ ಮನೆಗೆ ನುಗ್ಗಿ ನಿದ್ರಿಸುತ್ತಿದ್ದ ಶಶಾಂಕ್ ಮೇಲೆ 12ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಶಶಾಂಕ್ ಅವರ ಕಿರುಚಾಟ ಮತ್ತು 3 ವರ್ಷದ ಮಗುವಿನ ಅಳುವಿನ ಶಬ್ದ ಕೇಳಿ ನೆರೆಹೊರೆಯವರು ಓಡಿ ಬಂದಾಗ ಪ್ರತಾಪ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಹಾಗೂ ಸೊಸೈಟಿ ಗಾರ್ಡ್ ಸೇರಿ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ: ಕಳೆದ 7-8 ತಿಂಗಳಿನಿಂದ ಜಿಮ್‌ಗೆ ಹೋಗುತ್ತಿದ್ದ ಪ್ರಿಯಾ ಶರ್ಮಾ ಹಾಗೂ ಜಿಮ್ ಟ್ರೇನರ್ ಪ್ರತಾಪ್ ಸಿಂಗ್ ನಡುವೆ ಪ್ರೇಮಾಂಕುರವಾಗಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಈ ವಿಚಾರ ಪತಿಗೆ ತಿಳಿದು ಬೇರೆಡೆಗೆ ಮನೆ ಬದಲಾಯಿಸಲು ನಿರ್ಧರಿಸಿದ್ದರಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು.

ಸಿಸಿಟಿವಿಯಲ್ಲಿ ಸಂಚು ಬಯಲು: ಪತ್ನಿ ಪ್ರಿಯಾ ಬೆಳಗಿನ ಜಾವವೇ ಬಾಗಿಲು ತೆರೆದಿಟ್ಟು ಕಾರಿನಲ್ಲಿ ಹೊರಟುಹೋಗುವುದು ಹಾಗೂ ಕೆಲವೇ ನಿಮಿಷಗಳಲ್ಲಿ ಪ್ರತಾಪ್ ಕತ್ತಿ ಹಿಡಿದು ಮನೆಗೆ ನುಗ್ಗುವುದು ಸಿಸಿಟಿವಿಯಲ್ಲಿ ಸಾಕ್ಷಿಯಾಗಿದೆ.

ಸಂತ್ರಸ್ತನ ಸ್ಥಿತಿ ಗಂಭೀರ: ತೀವ್ರವಾಗಿ ಗಾಯಗೊಂಡಿರುವ ಶಶಾಂಕ್ ಕಾಂಥಾರಿಯಾ ಅವರ ಶ್ವಾಸಕೋಶ, ಕುತ್ತಿಗೆ ಹಾಗೂ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಪೊಲೀಸರು ಪ್ರಿಯಾ ಶರ್ಮಾ ಹಾಗೂ ಜಿಮ್ ಟ್ರೇನರ್ ಪ್ರತಾಪ್ ಸಿಂಗ್ ಅವರನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles