ಹೊಸದೆಹಲಿ: ಛಟ್ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ದೆಹಲಿಯ ಯಮುನಾ ನದಿಯ ಮಾಲಿನ್ಯ ಮತ್ತೊಮ್ಮೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಈಶಾನ್ಯ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸೋನಿಯಾ ವಿಹಾರ್ ಘಾಟ್ನಲ್ಲಿ ಯಮುನಾ ನದಿಯಲ್ಲಿ ಮುಳುಗೆದ್ದು, ನದಿಯ ನೀರನ್ನು ಕುಡಿದು ನದಿ ನೀರು ಸ್ವಚ್ಛವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವಿಡಿಯೋ ವೀಕ್ಷಿಸಿ:
केजरीवाल जी और राहुल गांधी जी, यह रील नहीं, हकीकत है।
यह दिल्ली की ही यमुना जी हैं। आज मैंने यहाँ स्नान भी किया और आचमन भी किया।
केजरीवाल जी राहुल गांधी जी आप कब आ रहे हो डुबकी लगाने?@ArvindKejriwal @RahulGandhi pic.twitter.com/cjrvQNUCqN
— Manoj Tiwari (@ManojTiwariMP) October 29, 2026
“ನದಿಯಲ್ಲಿ ಮೊಸಳೆಗಳು ಇರಬಹುದು, ಆದರೆ ಮೊಸಳೆಗಳು ಸ್ವಚ್ಛವಾದ ನೀರಿನಲ್ಲಿ ಮಾತ್ರ ಇರುತ್ತವೆ” ಎಂದು ತಿವಾರಿ ಹೇಳಿಕೆ ನೀಡಿದ್ದು, ಕಳೆದ ಒಂದು ವರ್ಷದಲ್ಲಿ ಯಮುನೆಯ ಮಾಲಿನ್ಯ ಪ್ರಮಾಣ ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಸಂಸದ ಮನೋಜ್ ತಿವಾರಿ ಅವರ ಈ ನಡೆಯ ವಿರುದ್ಧ ಆಮ್ ಆದ್ಮಿ ಪಾರ್ಟಿ (AAP) ತೀವ್ರ ವಾಗ್ದಾಳಿ ನಡೆಸಿದೆ. ಪಲ್ಲಾದಿಂದ ವಜೀರಾಬಾದ್ವರೆಗಿನ 26 ಕಿ.ಮೀ ಪ್ರದೇಶದ ನದಿ ನೀರು ಮೊದಲಿನಿಂದಲೂ ತುಲನಾತ್ಮಕವಾಗಿ ಸ್ವಚ್ಛವಾಗಿಯೇ ಇದೆ. ಧೈರ್ಯವಿದ್ದರೆ ಕಾಳಿಂದಿ ಕುಂಜ್ (ಓಖ್ಲಾ) ಘಾಟ್ ಬಳಿ ಹೋಗಿ ನೀರು ಕುಡಿಯಲಿ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಸವಾಲು ಹಾಕಿದ್ದಾರೆ. ಇತ್ತ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ವರದಿಗಳ ಪ್ರಕಾರ, ಯಮುನಾ ನದಿಯ ಹಲವು ಭಾಗಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಮಾಲಿನ್ಯದ ಪ್ರಮಾಣ ನಿಗದಿಗಿಂತ ಹಲವು ಪಟ್ಟು ಹೆಚ್ಚಾಗಿದ್ದು, ಸ್ನಾನ ಮಾಡಲು ಇನ್ನು ಸುರಕ್ಷಿತವಾಗಿಲ್ಲ ಎಂದು ದತ್ತಾಂಶಗಳು ತಿಳಿಸಿವೆ.
ಸಂಸದನ ಸಾಹಸ: ಸೋನಿಯಾ ವಿಹಾರ್ನಲ್ಲಿ ಯಮುನಾ ನದಿಯಲ್ಲಿ ಮುಳುಗೆದ್ದು ನೀರು ಕುಡಿದು ನದಿ ಸ್ವಚ್ಛವಾಗಿದೆ ಎಂದು ಪ್ರತಿಪಾದಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ.
ಆಪ್ ತಿರುಗೇಟು: ಪಲ್ಲಾ ಭಾಗದ ನದಿ ನೀರು ಎಂದಿಗೂ ಸ್ವಚ್ಛವಾಗಿಯೇ ಇರುತ್ತದೆ, ಧೈರ್ಯವಿದ್ದರೆ ಅತ್ಯಂತ ಕಲುಷಿತವಾಗಿರುವ ಕಾಳಿಂದಿ ಕುಂಜ್ ಘಾಟ್ಗೆ ಹೋಗಿ ನೀರು ಕುಡಿಯಲಿ ಎಂದು ಆಪ್ ಸವಾಲು.
ದತ್ತಾಂಶ ವರದಿ: ಡಿಪಿಸಿಸಿ ವರದಿ ಪ್ರಕಾರ ನದಿಯಲ್ಲಿ ಮಾಲಿನ್ಯದ ಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದರೂ, ಬ್ಯಾಕ್ಟೀರಿಯಾ ಮತ್ತು ರಾಸಾಯನಿಕ ಮಟ್ಟವು ನಿಗದಿತ ಮಿತಿಗಿಂತ 6 ರಿಂದ 14 ಪಟ್ಟು ಹೆಚ್ಚಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ 8,941 ಕೋಟಿ ರೂ. ವೆಚ್ಚದ 43 ಯಮುನಾ ನದಿ ಸ್ವಚ್ಛತಾ ಯೋಜನೆಗಳಿಗೆ ಚಾಲನೆ ನೀಡಿದ್ದು, 2029 ರ ವೇಳೆಗೆ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.





Leave a comment