Home ಕ್ರೈಂ ನ್ಯೂಸ್ ಯುವತಿಯರಿಗೆ ನಡುರಾತ್ರಿ ಭೀತಿ: ಸ್ಕಾರ್ಪಿಯೋ ಕಾರಿನಲ್ಲಿ ಬೆನ್ನಟ್ಟಿ ಕಿರುಕುಳ ನೀಡಿದ ಪುರುಷ ಮತ್ತು ಮಹಿಳೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಯುವತಿಯರಿಗೆ ನಡುರಾತ್ರಿ ಭೀತಿ: ಸ್ಕಾರ್ಪಿಯೋ ಕಾರಿನಲ್ಲಿ ಬೆನ್ನಟ್ಟಿ ಕಿರುಕುಳ ನೀಡಿದ ಪುರುಷ ಮತ್ತು ಮಹಿಳೆ!

Share
ಯುವತಿ
Share

ಗುರುಗ್ರಾಮ್ (ಹರಿಯಾಣ): ಹರಿಯಾಣದ ಗುರುಗ್ರಾಮದಲ್ಲಿ ತಡರಾತ್ರಿ ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ಯುವತಿಯರಿಗೆ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಪುರುಷ ಮತ್ತು ಮಹಿಳೆಯೊಬ್ಬರು ಸತತವಾಗಿ ಬೆನ್ನಟ್ಟಿ, ಕಿರುಕುಳ ನೀಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿ ಸೋನಿಕಾ ಎಂಬುವವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ತಮ್ಮ ನಿಗೂಢ ಹಾಗೂ ಭಯಾನಕ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಈ ವಿಷಯ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ಊಟದ ಬಳಿಕ ಮಾರುಕಟ್ಟೆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಂದ ಸ್ಕಾರ್ಪಿಯೋ ವಾಹನದಲ್ಲಿದ್ದ ವ್ಯಕ್ತಿ ಮತ್ತು ಮಹಿಳೆ, ಪಿಜಿ ಹುಡುಕುವ ನೆಪದಲ್ಲಿ ಯುವತಿಯರನ್ನು ಮಾತನಾಡಿಸಿದ್ದಾರೆ. ಬಳಿಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ, ದೀವಳಿಗೆ ಗಿಫ್ಟ್ ಎಂದು ಹಣ ನೀಡಲು ಯತ್ನಿಸಿ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಯುವತಿಯರು ಅಲ್ಲಿಂದ ಓಡಿ ತಲೆಮರೆಸಿಕೊಳ್ಳಲು ಯತ್ನಿಸಿದಾಗ, ಕಿಡಿಗೇಡಿಗಳು ಗಲ್ಲಿ ಗಲ್ಲಿಗಳಲ್ಲೂ ಕಾರಿನಲ್ಲಿ ಬೆನ್ನಟ್ಟಿದ್ದಾರೆ. ಕೊನೆಗೆ ಸಮೀಪದಲ್ಲಿದ್ದ ಪಿಜಿ ಒಂದಕ್ಕೆ ಓಡಿಹೋಗಿ ಇತರೆ ನಿವಾಸಿಗಳ ನೆರವಿನಿಂದ ಯುವತಿಯರು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಘಟನೆಯ ವಿವರ: ತಡರಾತ್ರಿ ಗುರುಗ್ರಾಮದಲ್ಲಿ ವಾಯುವಿಹಾರಕ್ಕೆ ಹೊರಟಿದ್ದ ಇಬ್ಬರು ಯುವತಿಯರಿಗೆ ಸ್ಕಾರ್ಪಿಯೋ ಕಾರಿನಲ್ಲಿದ್ದ ಕಿಡಿಗೇಡಿಗಳಿಂದ ಕಿರುಕುಳ.

ಬೆನ್ನಟ್ಟಿದ ಕಿಡಿಗೇಡಿಗಳು: ಹಣ ಹಾಗೂ ಉದ್ಯೋಗದ ಆಮಿಷ ಒಡ್ಡಿ ಕಾರಿಗೆ ಹತ್ತುವಂತೆ ಒತ್ತಾಯ, ನಿರಾಕರಿಸಿದಾಗ ಕಾರಿನಲ್ಲಿ ಸತತವಾಗಿ ಬೆನ್ನಟ್ಟಿದ ಆರೋಪಿಗಳು.

ಪೋಲೀಸ್ ತನಿಖೆ: ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಕ್ರಿಯಗೊಂಡ ಗುರುಗ್ರಾಮ ಪೊಲೀಸರು ಸಂತ್ರಸ್ತೆಯಿಂದ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

ಯುವತಿಯರು ಪೋಸ್ಟ್ ಮಾಡಿದ ಬೆನ್ನಲ್ಲೇ ಸ್ಪಂದಿಸಿರುವ ಗುರುಗ್ರಾಮ ಪೊಲೀಸರು, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles