Home ಕ್ರೈಂ ನ್ಯೂಸ್ ಆಮ್ ಆದ್ಮಿ ಪಾರ್ಟಿ ನಾಯಕನಿಗೆ ಬಿಗ್ ಶಾಕ್: PCS ಅಧಿಕಾರಿಯೆಂದು ನಂಬಿಸಿ ಮದುವೆಯಾಗಿ ನಗನಾಣ್ಯದೊಂದಿಗೆ ಎಸ್ಕೇಪ್ ಆದ 18 ವರ್ಷದ ಮಗನ ತಾಯಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಮ್ ಆದ್ಮಿ ಪಾರ್ಟಿ ನಾಯಕನಿಗೆ ಬಿಗ್ ಶಾಕ್: PCS ಅಧಿಕಾರಿಯೆಂದು ನಂಬಿಸಿ ಮದುವೆಯಾಗಿ ನಗನಾಣ್ಯದೊಂದಿಗೆ ಎಸ್ಕೇಪ್ ಆದ 18 ವರ್ಷದ ಮಗನ ತಾಯಿ!

Share
ಆಪ್
Share

ಫತೇಗಢ್ ಸಾಹಿಬ್ (ಪಂಜಾಬ್): ತಾನು ಸರ್ಕಾರಿ ಉನ್ನತಾಧಿಕಾರಿ ಎಂದು ನಂಬಿಸಿ, ವಯಸ್ಸಿನ ನಕಲಿ ದಾಖಲೆ ಸೃಷ್ಟಿಸಿ ಆಮ್ ಆದ್ಮಿ ಪಾರ್ಟಿ ಜಂಟಿ ಕಾರ್ಯದರ್ಶಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು, ಮದುವೆಯಾದ ಕೆಲವೇ ದಿನಗಳಲ್ಲಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದಿನೊಂದಿಗೆ ಪರಾರಿಯಾಗಿರುವ ಘಟನೆ ಪಂಜಾಬ್‌ನ ಫತೇಗಢ್ ಸಾಹಿಬ್‌ನಲ್ಲಿ ಬೆಳಕಿಗೆ ಬಂದಿದೆ.

ಫತೇಗಢ್ ಸಾಹಿಬ್‌ನ ಎಎಪಿ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪರಿಷತ್ ಸದಸ್ಯ ಅಮರಿಂದರ್ ಸಿಂಗ್ ಮಂಡೋಫಲ್ ಎಂಬುವರು ಈ ವಂಚನೆಗೆ ಒಳಗಾದ ನಾಯಕ.

ಘಟನೆಯ ಹಿನ್ನೆಲೆ ಹಾಗೂ ವಂಚನೆಯ ಜಾಲ:

ತರನ್ ತಾರನ್ ಜಿಲ್ಲೆಯ ಸೂರ್ ಸಿಂಗ್ ಗ್ರಾಮದ ನಿವಾಸಿ ಮನ್ವಿಂದರ್ ಕೌರ್ ಎಂಬಾಕೆ ತನ್ನನ್ನು ಪಂಜಾಬ್ ಸಿವಿಲ್ ಸರ್ವಿಸ್ (PCS) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ತಾನು ಕನ್ಯೆ (ಅವಿವಾಹಿತೆ) ಎಂದು ನಂಬಿಸಿದ್ದ ಆಕೆ, ಫೆಬ್ರವರಿ 2026ರಲ್ಲಿ ಅಮರಿಂದರ್ ಸಿಂಗ್ ಅವರೊಂದಿಗೆ ವಿಜೃಂಭಣೆಯಿಂದ ಮದುವೆಯಾಗಿದ್ದಳು. ಈ ಹೈಪ್ರೊಫೈಲ್ ವಿವಾಹ ಮಹೋತ್ಸವದಲ್ಲಿ ಪಂಜಾಬ್ ವಿಧಾನಸಭೆಯ ಸಭಾಪತಿ ಕುಲ್ತಾರ್ ಸಿಂಗ್ ಸಂಧ್ವಾನ್ ಸೇರಿದಂತೆ ಹಲವು ಸಚಿವರು ಮತ್ತು ಎಎಪಿ ಹಿರಿಯ ನಾಯಕರು ಭಾಗವಹಿಸಿದ್ದರು.

ಅಸಲಿ ಸತ್ಯ ಬೆಳಕಿಗೆ ಬಂದಿದ್ದು ಹೇಗೆ?

ಮದುವೆಯಾದ ನಂತರ ಆಕೆಯ ನಡವಳಿಕೆಯ ಮೇಲೆ ಅಮರಿಂದರ್ ಸಿಂಗ್‌ಗೆ ಅನುಮಾನ ಮೂಡಿದೆ. ಆಕೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದ ಅಮಾನತು ಆದೇಶ ಹಾಗೂ ಪೋಸ್ಟಿಂಗ್ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ತಿಳಿದುಬಂದಿದೆ.

ಸಿಂಗ್ ಅವರು ಸ್ವತಃ ತನಿಖೆ ನಡೆಸಿದಾಗ ಹೊರಬಿದ್ದ ಸತ್ಯಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ:

ಮನ್ವಿಂದರ್ ಕೌರ್ ಯಾವುದೇ ಪಿಸಿಎಸ್ ಅಧಿಕಾರಿಯಾಗಿರಲಿಲ್ಲ.

ಆಕೆಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿತ್ತು ಹಾಗೂ 18 ವರ್ಷದ ಮಗನಿದ್ದಾನೆ.

ಆಕೆಯ ನಿಜವಾದ ವಯಸ್ಸು 46 ವರ್ಷ. ಆದರೆ ನಕಲಿ ದಾಖಲೆ ಸೃಷ್ಟಿಸಿ ತನಗೆ 34 ವರ್ಷವೆಂದು ಸುಳ್ಳು ಹೇಳಿದ್ದಳು.

ಚಿನ್ನಾಭರಣದೊಂದಿಗೆ ಎಸ್ಕೇಪ್ – 6 ಜನರ ವಿರುದ್ಧ FIR:

ಮೋಸದಾಟ ಬಯಲಾಗುತ್ತಿದ್ದಂತೆ ಮನ್ವಿಂದರ್ ಕೌರ್ ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರದ ಆಭರಣಗಳು ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾಳೆ. ಅಮರಿಂದರ್ ಸಿಂಗ್ ನೀಡಿದ ದೂರಿನನ್ವಯ ಫತೇಗಢ್ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಮನ್ವಿಂದರ್ ಕೌರ್, ಆಕೆಯ ತಾಯಿ ವರಿಂದರ್‌ಜಿತ್ ಕೌರ್, ಸಹೋದರ ತರ್ಲೋಚನ್ ಸಿಂಗ್ ಸೇರಿದಂತೆ ಒಟ್ಟು 6 ಜನರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಕಾಯ್ದೆಯಡಿ FIR ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles