ಫತೇಗಢ್ ಸಾಹಿಬ್ (ಪಂಜಾಬ್): ತಾನು ಸರ್ಕಾರಿ ಉನ್ನತಾಧಿಕಾರಿ ಎಂದು ನಂಬಿಸಿ, ವಯಸ್ಸಿನ ನಕಲಿ ದಾಖಲೆ ಸೃಷ್ಟಿಸಿ ಆಮ್ ಆದ್ಮಿ ಪಾರ್ಟಿ ಜಂಟಿ ಕಾರ್ಯದರ್ಶಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು, ಮದುವೆಯಾದ ಕೆಲವೇ ದಿನಗಳಲ್ಲಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದಿನೊಂದಿಗೆ ಪರಾರಿಯಾಗಿರುವ ಘಟನೆ ಪಂಜಾಬ್ನ ಫತೇಗಢ್ ಸಾಹಿಬ್ನಲ್ಲಿ ಬೆಳಕಿಗೆ ಬಂದಿದೆ.
ಫತೇಗಢ್ ಸಾಹಿಬ್ನ ಎಎಪಿ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪರಿಷತ್ ಸದಸ್ಯ ಅಮರಿಂದರ್ ಸಿಂಗ್ ಮಂಡೋಫಲ್ ಎಂಬುವರು ಈ ವಂಚನೆಗೆ ಒಳಗಾದ ನಾಯಕ.
ತರನ್ ತಾರನ್ ಜಿಲ್ಲೆಯ ಸೂರ್ ಸಿಂಗ್ ಗ್ರಾಮದ ನಿವಾಸಿ ಮನ್ವಿಂದರ್ ಕೌರ್ ಎಂಬಾಕೆ ತನ್ನನ್ನು ಪಂಜಾಬ್ ಸಿವಿಲ್ ಸರ್ವಿಸ್ (PCS) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ತಾನು ಕನ್ಯೆ (ಅವಿವಾಹಿತೆ) ಎಂದು ನಂಬಿಸಿದ್ದ ಆಕೆ, ಫೆಬ್ರವರಿ 2026ರಲ್ಲಿ ಅಮರಿಂದರ್ ಸಿಂಗ್ ಅವರೊಂದಿಗೆ ವಿಜೃಂಭಣೆಯಿಂದ ಮದುವೆಯಾಗಿದ್ದಳು. ಈ ಹೈಪ್ರೊಫೈಲ್ ವಿವಾಹ ಮಹೋತ್ಸವದಲ್ಲಿ ಪಂಜಾಬ್ ವಿಧಾನಸಭೆಯ ಸಭಾಪತಿ ಕುಲ್ತಾರ್ ಸಿಂಗ್ ಸಂಧ್ವಾನ್ ಸೇರಿದಂತೆ ಹಲವು ಸಚಿವರು ಮತ್ತು ಎಎಪಿ ಹಿರಿಯ ನಾಯಕರು ಭಾಗವಹಿಸಿದ್ದರು.
ಮದುವೆಯಾದ ನಂತರ ಆಕೆಯ ನಡವಳಿಕೆಯ ಮೇಲೆ ಅಮರಿಂದರ್ ಸಿಂಗ್ಗೆ ಅನುಮಾನ ಮೂಡಿದೆ. ಆಕೆ ವಾಟ್ಸಾಪ್ನಲ್ಲಿ ಕಳುಹಿಸಿದ್ದ ಅಮಾನತು ಆದೇಶ ಹಾಗೂ ಪೋಸ್ಟಿಂಗ್ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ತಿಳಿದುಬಂದಿದೆ.
ಮನ್ವಿಂದರ್ ಕೌರ್ ಯಾವುದೇ ಪಿಸಿಎಸ್ ಅಧಿಕಾರಿಯಾಗಿರಲಿಲ್ಲ.
ಆಕೆಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿತ್ತು ಹಾಗೂ 18 ವರ್ಷದ ಮಗನಿದ್ದಾನೆ.
ಆಕೆಯ ನಿಜವಾದ ವಯಸ್ಸು 46 ವರ್ಷ. ಆದರೆ ನಕಲಿ ದಾಖಲೆ ಸೃಷ್ಟಿಸಿ ತನಗೆ 34 ವರ್ಷವೆಂದು ಸುಳ್ಳು ಹೇಳಿದ್ದಳು.
ಮೋಸದಾಟ ಬಯಲಾಗುತ್ತಿದ್ದಂತೆ ಮನ್ವಿಂದರ್ ಕೌರ್ ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರದ ಆಭರಣಗಳು ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾಳೆ. ಅಮರಿಂದರ್ ಸಿಂಗ್ ನೀಡಿದ ದೂರಿನನ್ವಯ ಫತೇಗಢ್ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಮನ್ವಿಂದರ್ ಕೌರ್, ಆಕೆಯ ತಾಯಿ ವರಿಂದರ್ಜಿತ್ ಕೌರ್, ಸಹೋದರ ತರ್ಲೋಚನ್ ಸಿಂಗ್ ಸೇರಿದಂತೆ ಒಟ್ಟು 6 ಜನರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಕಾಯ್ದೆಯಡಿ FIR ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
- AAP leader marriage fraud
- Amrinder Singh Mandofal
- Fake officer marries politician
- Fatehgarh Sahib marriage fraud
- Manwinder Kaur fraud case
- punjab crime news
- Punjab fake PCS officer news
- ಅಮರಿಂದರ್ ಸಿಂಗ್ ಮಂಡೋಫಲ್
- ಆಪ್ ನಾಯಕನಿಗೆ ವಂಚನೆ
- ನಕಲಿ ದಾಖಲೆ ಮದುವೆ
- ನಕಲಿ ಪಿಸಿಎಸ್ ಅಧಿಕಾರಿ ಮದುವೆ
- ಪಂಜಾಬ್ ಮದುವೆ ವಂಚನೆ ಪ್ರಕರಣ
- ಫತೇಗಢ್ ಸಾಹಿಬ್ ಅಪರಾಧ ಸುದ್ದಿ
- ಮನ್ವಿಂದರ್ ಕೌರ್





Leave a comment