Home ಕ್ರೈಂ ನ್ಯೂಸ್ ಪಾಕ್ ಬೆಡಗಿ ಹನಿಟ್ರ್ಯಾಪ್‌ಗೆ ಬಿದ್ದ ಭಾರತೀಯ ನೌಕಾಪಡೆಯ ನಾವಿಕ: ರಹಸ್ಯ ಮಾಹಿತಿ ಸೋರಿಕೆ ಆರೋಪದಡಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಾಕ್ ಬೆಡಗಿ ಹನಿಟ್ರ್ಯಾಪ್‌ಗೆ ಬಿದ್ದ ಭಾರತೀಯ ನೌಕಾಪಡೆಯ ನಾವಿಕ: ರಹಸ್ಯ ಮಾಹಿತಿ ಸೋರಿಕೆ ಆರೋಪದಡಿ ಬಂಧನ!

Share
ನಾವಿಕ
Share

ನವದೆಹಲ್ಲಿ/ಕೊಯಮತ್ತೂರು: ಸಾಮಾಜಿಕ ಜಾಲತಾಣಗಳ ಮೂಲಕ ಹನಿಟ್ರ್ಯಾಪ್‌ಗೆ ಸಿಲುಕಿ, ಪಾಕಿಸ್ತಾನದ ಬೇಹುಗಾರಿಕಾ ಏಜೆಂಟ್‌‌ಗೆ ಭಾರತೀಯ ನೌಕಾಪಡೆಯ ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಭಾರತೀಯ ನೌಕಾಪಡೆಯ ನಾವಿಕನೊಬ್ಬನನ್ನು ಆಂಧ್ರಪ್ರದೇಶ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ (CI) ಸೆಲ್ ಬಂಧಿಸಿದೆ.

ಬಂಧಿತ ಆರೋಪಿಯನ್ನು 31 ವರ್ಷದ ಪ್ರದೀಪ್ ಮುಖರ್ಜಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ನೌಕಾಪಡೆಯ ಪ್ರಮುಖ ನಾಯಕತ್ವ ತರಬೇತಿ ಕೇಂದ್ರವಾದ ಐಎನ್‌ಎಸ್ ಅಗ್ರಣಿ ಯಲ್ಲಿ ಅಕ್ಟೋಬರ್ 3ರಂದು ಆತನನ್ನು ಕೌಂಟರ್ ಇಂಟೆಲಿಜೆನ್ಸ್ ತಂಡವು ವಶಕ್ಕೆ ಪಡೆದುಕೊಂಡಿದೆ.

ಸೋಷಿಯಲ್ ಮೀಡಿಯಾ ಸ್ನೇಹದಿಂದ ಹನಿಟ್ರ್ಯಾಪ್:

ತನಿಖಾ ಮೂಲಗಳ ಪ್ರಕಾರ, ಆರೋಪಿ ಪ್ರದೀಪ್ ಮುಖರ್ಜಿಗೆ ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣವೊಂದರ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಮಹಿಳಾ ಏಜೆಂಟ್ ಒಬ್ಬಳ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವೆ ನಿಕಟ ಆನ್‌ಲೈನ್ ಬಾಂಧವ್ಯ ಬೆಳೆದಿತ್ತು. ಈ ಬಾಂಧವ್ಯವನ್ನು ಬಳಸಿಕೊಂಡು ಆಕೆ ಭಾರತೀಯ ನೌಕಾಪಡೆಯ ಆಯಕಟ್ಟಿನ ಪ್ರದೇಶಗಳು, ಸಮುದ್ರ ಮಾರ್ಗದ ಹಡಗುಗಳ ಚಲನವಲನ ಹಾಗೂ ವಿಶಾಖಪಟ್ಟಣಂ ನೌಕಾನೆಲೆಯ ಕಾರ್ಯನಿರ್ವಹಣಾ ರಹಸ್ಯ ಮಾಹಿತಿಗಳನ್ನು ಆತನಿಂದ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.

ಸಿಐ ಸೆಲ್‌ನಿಂದ ರಹಸ್ಯ ಕಾರ್ಯಾಚರಣೆ:

ಗಡಿಯಾಚೆಗಿನ ಗೂಢಚರ್ಯೆ ಹಾಗೂ ಭಯೋತ್ಪಾದನಾ ಬೆದರಿಕೆಗಳ ಮೇಲ್ವಿಚಾರಣೆ ನಡೆಸುವ ಆಂಧ್ರಪ್ರದೇಶದ ಸಿಐ ಸೆಲ್, ಪ್ರದೀಪ್ ಮುಖರ್ಜಿಯ ಅನುಮಾನಾಸ್ಪದ ಆನ್‌ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು. ಆತನ ಡಿಜಿಟಲ್ ಹೆಜ್ಜೆಗುರುತುಗಳು ಹಾಗೂ ಫೋನ್ ಸಂಭಾಷಣೆಗಳನ್ನು ಸುದೀರ್ಘವಾಗಿ ನಿಗಾದಲ್ಲಿರಿಸಿದ ಬಳಿಕವೇ ಈ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ.

ಈ ಘಟನೆಯು ದೇಶಾದ್ಯಂತ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲೂ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದ್ದು, ಸಶಸ್ತ್ರ ಪಡೆಗಳ ಸಿಬ್ಬಂದಿ ಸೋಷಿಯಲ್ ಮೀಡಿಯಾ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಜಾಗೃತಿ ವಹಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *