ಹೈದರಾಬಾದ್: ನಿರಂತರ ಲೈಂಗಿಕ ಕಿರುಕುಳ, ಈವ್-ಟೀಸಿಂಗ್ ಹಾಗೂ ಬೆದರಿಕೆಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬಳು ಸಂಚು ರೂಪಿಸಿ ಯುವಕನನ್ನು ಕೊಲೆ ಮಾಡಿರುವ ಭೀಕರ ಘಟನೆ ಹೈದರಾಬಾದ್ನ ಮಂಗಲ್ಹಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಹೀಂಪುರಾದಲ್ಲಿ ನಡೆದಿದೆ.
ಪ್ರಕರಣದ ವಿವರ:
ಶಿವಲಾಲ್ ನಗರದ ನಿವಾಸಿ ಅನಿಶಾ ಸಿಂಗ್ ಎಂಬ ನಾಲ್ಕು ಮಕ್ಕಳ ತಾಯಿಗೆ ಅದೇ ಪ್ರದೇಶದ ಸಾಯಿನಾಥ್ ಸಿಂಗ್ (26) ಎಂಬ ಯುವಕ ಕಳೆದ ಕೆಲ ಸಮಯದಿಂದ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಆತನಿಗೆ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರೂ ಆತನ ವಕ್ರಬುದ್ಧಿ ಬದಲಾಗಿರಲಿಲ್ಲ. ಸೋಮವಾರ ಮತ್ತೆ ಕರೆ ಮಾಡಿ ತನ್ನನ್ನು ಭೇಟಿಯಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು.
ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ಅನಿಶಾ, ರಹೀಂಪುರಾದಲ್ಲಿರುವ ತನ್ನ ತಾಯಿಯ ಮನೆಗೆ ಒಬ್ಬಳೇ ಇರುವುದಾಗಿ ನಂಬಿಸಿ ಆತನನ್ನು ಕರೆಸಿಕೊಂಡಿದ್ದಾಳೆ. ಆತ ಮನೆಗೆ ಕಾಲಿಡುತ್ತಿದ್ದಂತೆ, ತನ್ನ ಚುನ್ನಿಯಿಂದ (ದುಪಟ್ಟಾ) ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಪೋಲಿಸ್ ತನಿಖೆ ಮತ್ತು ಬಂಧನ:
ಒಬ್ಬಳೇ ಮಹಿಳೆ ಬಲಶಾಲಿಯಾದ ಯುವಕನನ್ನು ಹತ್ಯೆ ಮಾಡಲು ಸಾಧ್ಯವೇ ಎಂಬ ಅನುಮಾನದ ಮೇರೆಗೆ ಗೋಲ್ಕೊಂಡ ವಲಯ ಡಿಸಿಪಿ ಜೆ. ರಾಘವೇಂದ್ರ ರೆಡ್ಡಿ ಹಾಗೂ ಎಸಿಪಿ ತಿರುಪತಿ ಅವರ ಮಾರ್ಗದರ್ಶನದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ತನಿಖೆಯ ವೇಳೆ ಕೃತ್ಯದಲ್ಲಿ ಅನಿಶಾ ಸಿಂಗ್ ಸೇರಿ ಒಟ್ಟು 7 ಮಂದಿ (ಎರಡು ಮಹಿಳೆಯರು ಹಾಗೂ ಐದು ಪುರುಷರು) ಭಾಗಿಯಾಗಿರುವುದು ತಿಳಿದುಬಂದಿದೆ.
ಪೊಲೀಸರು ಪ್ರಮುಖ ಆರೋಪಿ ಅನಿಶಾ ಸಿಂಗ್, ಮಖನ್ ಬಾದಲ್ ಸಿಂಗ್, ಆಕಾಶ್ ಸಿಂಗ್, ಅಭಿಷೇಕ್ ಸಿಂಗ್, ಪೂಜಾರಿ ಲಖನ್ ಸಿಂಗ್, ಅಕ್ಷಯ್ ಸಿಂಗ್ ಮತ್ತು ದೇಗನ್ ನಂದಿತಾ ಅವರನ್ನು ಬಂಧಿಸಿದ್ದು, ಅವರಿಂದ 6 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
- Anisha Singh
- DCP Raghavendra Reddy.
- Eve Teasing Case
- Hyderabad crime news
- Hyderabad Murder Case
- Mangalhat Police Station
- Raheempura Murder
- Sainath Singh
- Sexual Harassment
- Telangana Police
- ಅನಿಶಾ ಸಿಂಗ್
- ಈವ್-ಟೀಸಿಂಗ್
- ಚುನ್ನಿಯಿಂದ ಉಸಿರುಗಟ್ಟಿಸಿ ಕೊಲೆ
- ತೆಲಂಗಾಣ ಪೊಲೀಸರು.
- ಮಂಗಲ್ಹಾಟ್ ಪೊಲೀಸ್ ಠಾಣೆ
- ಲೈಂಗಿಕ ಕಿರುಕುಳ
- ಸಾಯಿನಾಥ್ ಸಿಂಗ್
- ಹೈದರಾಬಾದ್ ಕೊಲೆ ಪ್ರಕರಣ
- ಹೈದರಾಬಾದ್ ಕ್ರೈಂ ನ್ಯೂಸ್





Leave a comment