ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಗರಾಡಳಿತ ನಿರ್ದೇಶನಾಲಯದ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ನೀರು ಸರಬರಾಜು ಆಪರೇಟರ್, ಸಹಾಯಕ ನೀರು ಸರಬರಾಜು ಆಪರೇಟರ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಒಟ್ಟು 210 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ನೀರು ಸರಬರಾಜು ಆಪರೇಟರ್: 80 ಹುದ್ದೆಗಳು
ಸಹಾಯಕ ನೀರು ಸರಬರಾಜು ಆಪರೇಟರ್: 122 ಹುದ್ದೆಗಳು
ಎಲೆಕ್ಟ್ರಿಷಿಯನ್ ಗ್ರೇಡ್-1: 03 ಹುದ್ದೆಗಳು
ಎಲೆಕ್ಟ್ರಿಷಿಯನ್ ಗ್ರೇಡ್-2: 05 ಹುದ್ದೆಗಳು
ಒಟ್ಟು ಹುದ್ದೆಗಳು: 210
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಹಾಗೂ ಸಂಬಂಧಿತ ಟ್ರೇಡ್ನಲ್ಲಿ ITI (ಎಲೆಕ್ಟ್ರಿಕಲ್ / ಫಿಟ್ಟರ್) ಪೂರ್ಣಗೊಳಿಸಿರಬೇಕು.
ವೇತನ ಶ್ರೇಣಿ:
ನೀರು ಸರಬರಾಜು ಆಪರೇಟರ್ / ಎಲೆಕ್ಟ್ರಿಷಿಯನ್ ಗ್ರೇಡ್-1: ರೂ. 37,500 – ರೂ. 76,100/- (ಪ್ರತಿ ತಿಂಗಳು)
ಸಹಾಯಕ ನೀರು ಸರಬರಾಜು ಆಪರೇಟರ್ / ಎಲೆಕ್ಟ್ರಿಷಿಯನ್ ಗ್ರೇಡ್-2: ರೂ. 34,100 – ರೂ. 67,600/- (ಪ್ರತಿ ತಿಂಗಳು)
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ
ವಯೋಸಡಿಲಿಕೆ:
ಪ್ರವರ್ಗ 2A, 2B, 3A, 3B: 3 ವರ್ಷಗಳು (43 ವರ್ಷಗಳವರೆಗೆ)
SC / ST / ಪ್ರವರ್ಗ-1: 5 ವರ್ಷಗಳು (45 ವರ್ಷಗಳವರೆಗೆ)
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಮತ್ತು ಪ್ರವರ್ಗ 2A/2B/3A/3B: ರೂ. 750/-
SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯ ಲಿಂಗಿಗಳು: ರೂ. 500/-
ವಿಶೇಷ ಪ್ರೋತ್ಸಾಹಕ ಅಭ್ಯರ್ಥಿಗಳು / ವಿಕಲಚೇತನರು: ರೂ. 250/-
ಪಾವತಿ ವಿಧಾನ: ಆನ್ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ:
ಕೆಇಎ (KEA) ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (ಪತ್ರಿಕೆ-1: ಕನ್ನಡ ಭಾಷಾ ಪರೀಕ್ಷೆ ಮತ್ತು ಪತ್ರಿಕೆ-2)
ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 16-09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-10-2026 (ವಿಸ್ತರಿಸಲಾಗಿದೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08-10-2026 (ವಿಸ್ತರಿಸಲಾಗಿದೆ)
ಸ್ಪರ್ಧಾತ್ಮಕ ಪರೀಕ್ಷೆ: ನವೆಂಬರ್ 2026
Official Website: cetonline.karnataka.gov.in
- Assistant Water Supply Operator
- cetonline.karnataka.gov.in
- ITI Jobs Karnataka
- KEA 210 Water Supply Operator Posts
- KEA Group C Vacancy 2026
- KEA Recruitment 2026
- Municipal Administration Jobs Karnataka
- Water Supply Operator Recruitment
- ಐಟಿಐ ಉದ್ಯೋಗಗಳು ಕರ್ನಾಟಕ
- ಕೆಇಎ ಗ್ರೂಪ್ ಸಿ ಹುದ್ದೆಗಳು
- ಕೆಇಎ ನೇಮಕಾತಿ 2026
- ನಗರಾಡಳಿತ ನಿರ್ದೇಶನಾಲಯ ನೇಮಕಾತಿ
- ನೀರು ಸರಬರಾಜು ಆಪರೇಟರ್ ಹುದ್ದೆಗಳು
- ಸಹಾಯಕ ನೀರು ಸರಬರಾಜು ಆಪರೇಟರ್





Leave a comment