Home ಕ್ರೈಂ ನ್ಯೂಸ್ ಲಾಡ್ಜ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್: ಪತಿಯ ಸ್ನೇಹಿತೆಯನ್ನೇ ರೇಪ್ ಮಾಡಿಸಲು ಸುಪಾರಿ ನೀಡಿದ್ದ ಪತ್ನಿ ಸೇರಿ 5 ಮಂದಿ ಅರೆಸ್ಟ್!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಲಾಡ್ಜ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್: ಪತಿಯ ಸ್ನೇಹಿತೆಯನ್ನೇ ರೇಪ್ ಮಾಡಿಸಲು ಸುಪಾರಿ ನೀಡಿದ್ದ ಪತ್ನಿ ಸೇರಿ 5 ಮಂದಿ ಅರೆಸ್ಟ್!

Share
ಪತಿ
Share

ಕೇರಳ: ವಿವಾಹಿತ ಪುರುಷ ಸ್ನೇಹಿತನೊಂದಿಗೆ ಖಾಸಗಿ ಲಾಡ್ಜ್‌‌‌‌ಗೆ ಬಂದಿದ್ದ ಮಹಿಳೆಯನ್ನು ನಕಲಿ ಪೊಲೀಸರ ವೇಷದಲ್ಲಿ ಬಂದ ಗ್ಯಾಂಗ್ ಅಪಹರಿಸಿ, ಆಕೆಯ ಮೇಲೆ ಭೀಕರ ಗ್ಯಾಂಗ್ ರೇಪ್ ಎಸಗಿರುವ ಶಂಕಾಸ್ಪದ ಮತ್ತು ಭೀಕರ ಘಟನೆ ಕೇರಳದ ತೃಶ್ಶೂರ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ತೃಶ್ಶೂರ್ ಸಿಟಿ ಪೊಲೀಸರು, ಕೃತ್ಯಕ್ಕೆ ಸುಪಾರಿ  ನೀಡಿದ್ದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ವಿವರ:

ತಮಿಳುನಾಡಿನ ತಿರುಪ್ಪೂರ್ ಮೂಲದ ಮಹಿಳೆ ತನ್ನ ವಿವಾಹಿತ ಪುರುಷ ಸ್ನೇಹಿತನೊಂದಿಗೆ ಕೇರಳದ ತೃಶ್ಶೂರ್‌ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದ ಬಳಿಯ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ತಂಗಿದ್ದರು. ಈ ವಿಷಯ ತಿಳಿದ ಐವರು ದುಷ್ಟರು ತಮ್ಮನ್ನು ತಾವು ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಲಾಡ್ಜ್ ಕೊಠಡಿಗೆ ಬಲವಂತವಾಗಿ ನುಗ್ಗಿದ್ದಾರೆ.

ಬಳಿಕ ಕೊಠಡಿಯಲ್ಲಿದ್ದ ಇಬ್ಬರ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಬಿಗಿದು, ಬಾಯಿಗೆ ಬಟ್ಟೆ ತುರುಕಿ, ಕಾರಿನಲ್ಲಿ ತಮಿಳುನಾಡಿನ ಕಡೆಗೆ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದಾರೆ. ಪ್ರಯಾಣದ ಉದ್ದಕ್ಕೂ ಆ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದು, ಆತನ ಕೈ ಹಾಗೂ ಕಾಲುಗಳನ್ನು ಮುರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆ ಬಳಿಕ ಆತನನ್ನು ತಿರುಪ್ಪೂರ್ ಆಸ್ಪತ್ರೆಯೊಂದರ ಬಳಿ ಎಸೆದು, ಮಹಿಳೆಯನ್ನು ಮತ್ತೊಂದು ಕಾರಿಗೆ ವರ್ಗಾಯಿಸಿ ಆಕೆಯ ಮೇಲೆ ಭೀಕರವಾಗಿ ಗ್ಯಾಂಗ್ ರೇಪ್ ಎಸಗಿದ್ದಾರೆ.

ಪತಿಯ ಫೋನ್ ಲೋಕೇಶನ್ ಟ್ರ್ಯಾಕ್ ಮಾಡಿ ಸುಪಾರಿ ಕೊಟ್ಟ ಪತ್ನಿ:

ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ತನಿಖೆಯ ವೇಳೆ ದಿಗಿಲುಗೊಳಿಸುವ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿಯೇ ಈ ಇಡೀ ಕೃತ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿ ಸುಪಾರಿ ನೀಡಿದ್ದಳು.

ತನ್ನ ಪತಿಯ ಮೊಬೈಲ್ ಫೋನ್ ಲೋಕೇಶನ್ ಅನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದ್ದ ಆಕೆ, ಆತ ಕೇರಳದ ಲಾಡ್ಜ್‌ನಲ್ಲಿ ತಂಗಿರುವ ನಿಖರ ಮಾಹಿತಿಯನ್ನು ರೌಡಿ ಗ್ಯಾಂಗ್‌ಗೆ ರವಾನಿಸಿ, ದಾಳಿ ನಡೆಸಲು ಕ್ವಟೇಷನ್ ನೀಡಿದ್ದಳು ಎಂಬುದು ದೃಢಪಟ್ಟಿದೆ.

ಐವರು ಆರೋಪಿಗಳ ಬಂಧನ:

ಪ್ರಸ್ತುತ ತೃಶ್ಶೂರ್ ಪೊಲೀಸರು ಈ ಕೃತ್ಯದ ಪ್ರಮುಖ ರೂವಾರಿ ಪತ್ನಿ ಹಾಗೂ ಕೃತ್ಯ ಎಸಗಿದ ಗೂಂಡಾಗಳು ಸೇರಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪ್ರಕರಣದ ಕುರಿತು ಮತ್ತಷ್ಟು ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *