Home ಕ್ರೈಂ ನ್ಯೂಸ್ ಗಾಂಜಾ ಖರೀದಿಸಲು ₹60 ಕೊಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಮಗ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಗಾಂಜಾ ಖರೀದಿಸಲು ₹60 ಕೊಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಮಗ!

Share
ತಾಯಿ
Share

ಮಹೋಬಾ (ಉತ್ತರ ಪ್ರದೇಶ): ಗಾಂಜಾ ಖರೀದಿಸಲು ಕೇವಲ 60 ರೂಪಾಯಿ ಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗನೊಬ್ಬ ಕೊಡಲಿಯಿಂದ ಕೊಚ್ಚಿ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದ ದುರದೃಷ್ಟಕರ ತಾಯಿಯನ್ನು ಮೂಲಾ ದೇವಿ (51) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿ ಮಗನನ್ನು ಮೋಹನ್ ಯಾದವ್ (28) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಅರೋಪಿ ಮೋಹನ್ ಯಾದವ್ ತೀವ್ರ ಗಾಂಜಾ ಚಟಕ್ಕೆ ದಾಸನಾಗಿದ್ದ. ಘಟನೆ ನಡೆದ ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ತನ್ನ ತಾಯಿ ಬಳಿ ಗಾಂಜಾ ಕೊಳ್ಳಲು 60 ರೂಪಾಯಿ ನೀಡುವಂತೆ ಪಟ್ಟು ಹಿಡಿದಿದ್ದಾನೆ. ತಾಯಿ ಹಣ ಇಲ್ಲವೆಂದು ನಿರಾಕರಿಸಿದಾಗ ಆಕ್ರೋಶಗೊಂಡ ಪಾತಕಿ, ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ತಾಯಿಯ ಕುತ್ತಿಗೆಗೆ ಐದಕ್ಕೂ ಹೆಚ್ಚು ಬಾರಿ ಬಲವಾಗಿ ಬೀಸಿದ್ದಾನೆ. ತೀವ್ರ ರಕ್ತಸ್ರಾವದಿಂದ ತಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹೆಣದ ಪಕ್ಕದಲ್ಲೇ 2 ಗಂಟೆ ಕುಳಿತಿದ್ದ ಕೊಲೆಗಡುಕ:

ಕೊಲೆ ಮಾಡಿದ ನಂತರ ಆರೋಪಿ ಅಲ್ಲಿಂದ ಓಡಿಹೋಗದೆ, ಸುಮಾರು ಎರಡು ಗಂಟೆಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ. ಕೊಲೆಯಾದ ವಿಷಯ ಅವರ ಸಂಬಂಧಿ ಮನೆಗೆ ಬಂದಾಗ ಹಾಗೂ ನೊಯ್ಡಾದಿಂದ ಹಿರಿಯ ಮಗ ಸೋಹನ್ ಯಾದವ್ ಬಂದಾಗ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕುಲಪಹಾಡ್ ಠಾಣೆಯ ಪೊಲೀಸರು ಮತ್ತು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಮೋಹನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

Share

Leave a comment

Leave a Reply

Your email address will not be published. Required fields are marked *