Home ದಾವಣಗೆರೆ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ ರಾಜಕೀಯ ಪ್ರೇರಿತವಲ್ಲ, ಬಿಜೆಪಿ-ಆರ್‌ಎಸ್‌ಎಸ್ ಜತೆ ನಂಟಿಲ್ಲ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿನ ಆರೋಪಕ್ಕೆ ಅಣ್ಣಾ ಹಜಾರೆ ಕೌಂಟರ್!
ದಾವಣಗೆರೆನವದೆಹಲಿಬೆಂಗಳೂರು

‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ ರಾಜಕೀಯ ಪ್ರೇರಿತವಲ್ಲ, ಬಿಜೆಪಿ-ಆರ್‌ಎಸ್‌ಎಸ್ ಜತೆ ನಂಟಿಲ್ಲ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿನ ಆರೋಪಕ್ಕೆ ಅಣ್ಣಾ ಹಜಾರೆ ಕೌಂಟರ್!

Share
ಅಣ್ಣಾ ಹಜಾರೆ
Share

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದಲ್ಲಿ ಮಾಡಲಾಗಿರುವ ಗಂಭೀರ ಆರೋಪವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತೀವ್ರವಾಗಿ ಖಂಡಿಸಿ, ತಳ್ಳಿಹಾಕಿದ್ದಾರೆ. 2011-2012ರಲ್ಲಿ ತಾವೂ ನಡೆಸಿದ ‘ಭ್ರಷ್ಟಾಚಾರದ ವಿರುದ್ಧ ಭಾರತ’ (India Against Corruption) ಆಂದೋಲನಕ್ಕೆ ಬಿಜೆಪಿಯಿಂದ ಅಥವಾ ಆರ್‌ಎಸ್‌ಎಸ್‌ನಿಂದ ತೆರೆಮರೆಯ ಬೆಂಬಲವಿತ್ತು ಎಂಬ ಸೋನಿಯಾ ಗಾಂಧಿ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, “ನಾನು ಮಾಡುವುದೆಲ್ಲವೂ ಸಮಾಜ ಮತ್ತು ದೇಶಕ್ಕಾಗಿ. ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ನಮ್ಮ ದೇಶವೇ ನನಗೆ ಮೊದಲ ಆದ್ಯತೆ” ಎಂದು ಹೇಳಿದರು.

ಆರೋಪಕ್ಕೆ ಅಣ್ಣಾ ಹಜಾರೆ ತಿರುಗೇಟು: ಸೋನಿಯಾ ಗಾಂಧಿ ಅವರು ತಮ್ಮನ್ನು ಎಂದಿಗೂ ನೇರವಾಗಿ ನೋಡಿಯೂ ಇಲ್ಲ, ತಾವೂ ಅವರನ್ನು ನೋಡಿಲ್ಲ. ಯಾರನ್ನೂ ನೋಡದೆ, ಮಾತನಾಡದೆ ಇಂತಹ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಜವಾಬ್ದಾರಿಯುತ ನುಡಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮಾತನಾಡುವಾಗ ಜಾಗರೂಕರಾಗಿರಬೇಕು. ಅಸ್ಪಷ್ಟವಾಗಿ ಅಥವಾ ಆಧಾರವಿಲ್ಲದೆ ಮಾತನಾಡುವುದು ಅವರ ವ್ಯಕ್ತಿತ್ವವನ್ನೇ ಕುಗ್ಗಿಸುತ್ತದೆ ಎಂದು ಅಣ್ಣಾ ಹಜಾರೆ ಕಟುವಾಗಿ ನುಡಿದರು.

ಆತ್ಮಕತೆಯಲ್ಲಿ ಏನಿದೆ?: 2012ರ ಅಣ್ಣಾ ಹಜಾರೆ ಅವರ ಲೋಕಪಾಲ್ ಆಂದೋಲನವು ಯುಪಿಎ ಸರ್ಕಾರವನ್ನು ಹಿನ್ನಡೆಗೊಳಿಸಿತ್ತು ಮತ್ತು ಅದಕ್ಕೆ ಬಿಜೆಪಿ-ಆರ್‌ಎಸ್‌ಎಸ್‌ನ ಬೆಂಬಲವಿತ್ತು ಎಂದು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಇದರ ವಿರುದ್ಧವೇ ಅಣ್ಣಾ ಹಜಾರೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ದೇಶದ ಹಿತಕ್ಕಾಗಿ ತಾವು ನಡೆಸಿದ ಐತಿಹಾಸಿಕ ಹೋರಾಟದ ಬಗ್ಗೆ ನೀಡಿರುವ ಹೇಳಿಕೆಗಳು ಸರಿಯಲ್ಲ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಸ್ಪಷ್ಟನೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles