Home ದಾವಣಗೆರೆ ಒಂದೇ ವೇದಿಕೆಯಲ್ಲಿ ಸಿರಿಗೆರೆ ಶ್ರೀ, ಸಾಣೇಹಳ್ಳಿ ಶ್ರೀಗಳು: ಗುರುಸ್ಮರಣೆಯಲ್ಲಿ ಸಿರಿಗೆರೆ… ಭಕ್ತಿಭಾವದಲ್ಲಿ ಮಿಂದೆದ್ದ ಶ್ರದ್ಧಾಂಜಲಿ ಮಹಾಪರ್ವ: ಹರಿದುಬಂದ ಭಕ್ತಸಾಗರ
ದಾವಣಗೆರೆಬೆಂಗಳೂರು

ಒಂದೇ ವೇದಿಕೆಯಲ್ಲಿ ಸಿರಿಗೆರೆ ಶ್ರೀ, ಸಾಣೇಹಳ್ಳಿ ಶ್ರೀಗಳು: ಗುರುಸ್ಮರಣೆಯಲ್ಲಿ ಸಿರಿಗೆರೆ… ಭಕ್ತಿಭಾವದಲ್ಲಿ ಮಿಂದೆದ್ದ ಶ್ರದ್ಧಾಂಜಲಿ ಮಹಾಪರ್ವ: ಹರಿದುಬಂದ ಭಕ್ತಸಾಗರ

Share
ಸಿರಿಗೆರೆ
Share
ಸಿರಿಗೆರೆ:  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಸಮಾರಂಭವು ಸಿರಿಗೆರೆಯಲ್ಲಿ ಭಕ್ತಿಭಾವ, ಗುರುಸ್ಮರಣೆ ಹಾಗೂ ಶ್ರದ್ಧೆಯ ವಾತಾವರಣದಲ್ಲಿ ನೆರವೇರಿತು. ಗುರುಗಳ ಸೇವೆ, ಸರಳತೆ, ಸಮಾಜಮುಖಿ ಚಿಂತನೆ ಹಾಗೂ ಜನಹಿತದ ಕಾಯಕವನ್ನು ಸ್ಮರಿಸುತ್ತಾ ಸಹಸ್ರಾರು ಭಕ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಗುರುಸ್ಮರಣೆಯಲ್ಲಿ ಗಣ್ಯರ ಸಮಾಗಮ

ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ, ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠದ ಪೂಜ್ಯರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಉಪಸ್ಥಿತರಿದ್ದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ  ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿಯವರು, ಕೆ.ಎಸ್. ನವೀನ್, ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ರಾಜ್ಯ ರೈತ ಸಂಘ ಹಾಗೂ ಸಾಧು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ್, ಚಿತ್ರನಟ ಕೌಶಿಕ್, ತುಮ್ಕೋಸ್ ಅಧ್ಯಕ್ಷ ಹೆಚ್.ಎಸ್. ಶಿವಕುಮಾರ್, ಚನ್ನಗಿರಿ ಸೇರಿದಂತೆ ಹಲವು ಗಣ್ಯರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಲಿಂಗೈಕ್ಯ ಶ್ರೀಗಳ ಸ್ಮರಣೆ ಸಿರಿಗೆರೆಯ ನೆಲದಲ್ಲಿ ಮತ್ತೊಮ್ಮೆ ಗುರುಭಕ್ತಿಯ ಕಂಪನ ಮೂಡಿಸಿತು. ಅವರ ಸೇವಾ ಪರಂಪರೆ, ಆದರ್ಶಗಳು ಹಾಗೂ ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗಲಿ ಎಂಬುದು ಭಕ್ತರ ಆಶಯ.
Share

Leave a comment

Leave a Reply

Your email address will not be published. Required fields are marked *

Related Articles